ಟಿ20 ವಿಶ್ವಕಪ್ ಗೆ ರಿಷಬ್ ಪಂತ್?: ಜಯ್​ ಶಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಬರೋಬ್ಬರಿ 1 ವರ್ಷಕ್ಕೂ ಅಧಿಕ ದಿನಗಳ ನಂತರ ಮತ್ತೆ ಅಖಾಡಕ್ಕೆ ಮರಳಲು ಸಜ್ಜಾಗಿದ್ದಾರೆ. ಪಂತ್ ಪೂರ್ಣ ಫಿಟ್ ಆಗಿದ್ದಾರೆ ಎಂದು ಎನ್​ಸಿಎ ವರದಿ ನೀಡಿದೆ.

ಹೀಗಾಗಿ ಮುಂಬರುವ ಐಪಿಎಲ್‌ನಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ತಂಡವನ್ನು ಮುನ್ನಡೆಸುವುದನ್ನು ಕಾಣಬಹುದಾಗಿದೆ. ಇದರ ಜೊತೆಗೆ ಟೀಂ ಇಂಡಿಯಾ ಪಾಳಯದಲ್ಲೂ ಸಂತಸ ಮೂಡಿಸಿದೆ.

ಏಕೆಂದರೆ ಐಪಿಎಲ್ ಮುಗಿದ ಕೆಲವೇ ದಿನಗಳ ನಂತರ ಟಿ20 ವಿಶ್ವಕಪ್ ನಡೆಯಲ್ಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟರ್ ಯಾರು ಎಂಬ ಪ್ರಶ್ನೆ ಇಲ್ಲಿಯವರೆಗೆ ಕಾಡುತ್ತಿತ್ತು. ಆದರೀಗ ಪಂತ್ ಐಪಿಎಲ್​ಗೆ ಮರಳಿರುವುದು ಅವರು ಟಿ20 ವಿಶ್ವಕಪ್‌ ಆಡುವ ಬಗ್ಗೆಯೂ ಸುಳಿವು ನೀಡಿದೆ.

ರಿಷಬ್ ಪಂತ್ ಗಾಯದಿಂದ ಚೇತರಿಸಿಕೊಂಡು ಆಟಕ್ಕೆ ಮರಳಿರುವ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಡಿಸೆಂಬರ್ 2022 ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದ ನಂತರ ಪಂತ್ ಆಟದಿಂದ ದೂರವಾಗಿದ್ದಾರೆ. ಅವರು ಬ್ಯಾಟಿಂಗ್ ಜೊತೆಗೆ ಉತ್ತಮವಾಗಿ ಕೀಪಿಂಗ್ ಕೂಡ ಮಾಡುತ್ತಿದ್ದಾರೆ ಎಂದಿದ್ದಾರೆ.

ಇನ್ನು ಪಂತ್ ಟಿ20 ವಿಶ್ವಕಪ್​ನಲ್ಲಿ ಆಡುವ ಬಗ್ಗೆಯೂ ಮಾತನಾಡಿದ ಜಯ್​ ಶಾ, ಪಂತ್ ಟಿ20 ವಿಶ್ವಕಪ್ ಆಡಿದರೆ ಅದು ನಮಗೆ ದೊಡ್ಡ ವಿಷಯ. ಅವರು ನಮಗೆ ಪ್ರಮುಖ ಆಟಗಾರ. ಅವರು ಐಪಿಎಲ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂದು ನೋಡೋಣ ಎಂದಿದ್ದಾರೆ. .

2024 ರ ಐಪಿಎಲ್​ನಲ್ಲಿ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿದರೆ, 2024 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಮೊದಲ ಆಯ್ಕೆಯಾಗಲಿದ್ದಾರೆ ಎಂಬುದು ಜಯ್ ಶಾ ಅವರ ಈ ಹೇಳಿಕೆಯಿಂದ ಸ್ಪಷ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!