ಇದೀಗ ಐಬಿಎಮ್‌ ಸರದಿ: 3,900 ಉದ್ಯೋಗ ಕಡಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಹಿಂಜರಿತದ ಭೀತಿಯಿಂದ ಕಾರ್ಪೋರೇಟ್‌ ವಲಯದಲ್ಲಿ ಉದ್ಯೋಗ ಕಡಿತ ಮುಂದುವರೆದಿದ್ದು ಇದೀಗ ಪ್ರಸಿದ್ಧ ಟೆಕ್‌ ಕಾರ್ಪೋರೇಟ್‌ ಕಂಪನಿ ಐಬಿಎಮ್‌ ತನ್ನ 3,900 ಉದ್ಯೋಗಿಗಳನ್ನು ಹೊರ ಹಾಕುವುದಾಗಿ ಘೊಷಿಸಿದೆ. ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಐಬಿಎಮ್‌ ತನ್ನ ಹೂಡಿಕೆಗಳನ್ನು ಹಿಂಪಡೆಯುವ ಭಾಗವಾಗಿ ಉದ್ಯೋಗ ಕಡಿತವನ್ನೂ ಘೋಷಿಸಿದೆ.

ಈ ಮೂಲಕ ಕಂಪನಿಯು ತನ್ನ ವಾರ್ಷಿಕ ನಗದು ಗುರಿಯನ್ನು ಕಡಿಮೆ ಮಾಡಿದ್ದು ವೆಚ್ಚಕಡಿತದ ಕ್ರಮಗಳನ್ನು ಘೋಷಿಸಿದೆ. ಆದರೆ ಈ ಕುರಿತು ಮುಖ್ಯ ಹಣಕಾಸು ಅಧಿಕಾರಿ ಜೇಮ್ಸ್ ಕವನಾಗ್ ಪ್ರತಿಕ್ರಿಯಿಸಿದ್ದು “ಕಂಪನಿಯು ಇನ್ನೂ ಕ್ಲೈಂಟ್-ಫೇಸಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ನೇಮಕಗಳನ್ನು ಮಾಡಿಕೊಳ್ಳಲಿದೆ” ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಈ ಉದ್ಯೋಗ ಕಡಿತಗಳು ಕಂಪನಿಯ ಕಿಂಡ್ರಿಲ್ ವ್ಯವಹಾರ ಹಾಗು AI ಘಟಕ ವ್ಯಾಟ್ಸನ್ ಹೆಲ್ತ್‌ನ ಒಂದು ಭಾಗಕ್ಕೆ ಸಂಬಂಧಿಸಿದೆ ಎಂದು ಕಂಪನಿ ಹೇಳಿದೆ. ಐಬಿಎಮ್‌ 2022ರಲ್ಲಿ 9.3 ಶತಕೋಟಿ ಡಾಲರ್‌ ನಗದು ಹರಿವು ದಾಖಲಿಸಿದ್ದು ಅದರ ಗುರಿ 10 ಶತಕೋಟಿ ಡಾಲರ್‌ ಗಿಂತ ಕಡಿಮೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಉದ್ಯೋಗ ಕಡಿತದಂತಹ ಕ್ರಮಗಳಿಗೆ ಮುಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!