ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸ್ತುತ, ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ದೇಶದ ಎಲ್ಲಾ ಭಾಗಗಳಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚುತ್ತಿವೆ. ಕೆಲವೇ ಜನರು ನಗದು ರೂಪದಲ್ಲಿ ಪಾವತಿಸುತ್ತಾರೆ. ಮೆಟ್ರೋ ಮಾದರಿಯ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆಯು ಈಗ ಎಲ್ಲಾ ರೈಲುಗಳಲ್ಲಿ ಲಭ್ಯವಿದೆ.
ಬೆಂಗಳೂರಿನ ಎಲ್ಲಾ ರೈಲು ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಬೆಂಗಳೂರಿನ 108 ರೈಲು ನಿಲ್ದಾಣಗಳಲ್ಲಿ ಆನ್‌ಲೈನ್ ಪಾವತಿಗಳು ಈಗ ಲಭ್ಯವಿವೆ.
KSR ಬೆಂಗಳೂರು ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣ, SMVT ಮತ್ತು ಕಂಟೋನ್ಮೆಂಟ್ ಸೇರಿದಂತೆ ಬೆಂಗಳೂರಿನ ಎಲ್ಲಾ ರೈಲು ನಿಲ್ದಾಣಗಳಲ್ಲಿ ಕ್ಯೂರ್ ಆರ್ ಕೋಡ್ ಅನ್ನು ಅಳವಡಿಸಲಾಗಿದೆ.
ಇನ್ನು ರೈಲು ಟಿಕೆಟ್ ಕೊಳ್ಳಲು ಪ್ರಯಾಣಿಕರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಚಿಲ್ಲರೆ ಸಮಸ್ಯೆಗಳಿಲ್ಲ. QR ಕೋಡ್ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು.