ಆಯುರ್ವೇದ ಅಷ್ಟೇ ಅಲ್ಲ..ಲಕ್ಷ್ಮೀ ಕಟಾಕ್ಷಕ್ಕೂ ಪಾತ್ರವಾಗುವ ʻಗುಲಗಂಜಿʼ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಲ್ಭಾಗದಲ್ಲಿ ಕೆಂಪು, ಕೆಳಭಾಗದಲ್ಲಿ ಕಪ್ಪು ಬಣ್ಣವನ್ನು ಹೊದಿರುವ ಗುಲಗಂಜಿ ಬೀಜಗಳು ಆಯುರ್ವೇದ ಅಷ್ಟೇ ಅಲ್ಲದೆ..ಮಹಾಲಕ್ಷ್ಮೀ ಕೃಪಾ ಕಟಾಕ್ಷಕಕ್ಕೂ ಪಾತ್ರವಾಗುತ್ತಂತೆ. ಒಂದು ಕಾಲದಲ್ಲಿ ಚಿನ್ನ ಅಳತೆ ಮಾಡಲು ಸಹ ಈ ಗುಲಗಂಜಿಯನ್ನು ಬಳಸುತ್ತಿದ್ದರು. ಚಿನ್ನ ಎಂದರೆ ಲಕ್ಷ್ಮಿ ದೇವಿ. ಈ ಬೀಜಗಳೊಂದಿಗೆ ಚಿನ್ನವನ್ನು ತೂಗುವುದು ಎಂದರೆ ಲಕ್ಷ್ಮಿ ದೇವಿಯ ಕಟಾಕ್ಷ ಪಡೆದಂತೆಯೇ ಎಂದು ಜನ ನಂಬುತ್ತಾರೆ.

ಲಕ್ಷ್ಮಿ ದೇವಿಗೆ ಪ್ರಿಯ ಕೂಡ ಹೌದು. ಈ ದಿನಗಳಲ್ಲಿ ಅದೆಷ್ಟೋ ಜನರಿಗೆ ಈ ಬೀಜಗಳ ಬಗ್ಗೆ ಹೆಚ್ಚು ತಿಳಿದಿಲ್ಲದಿರಬಹುದು. ಆದರೆ ಆಯುರ್ವೇದದಲ್ಲಿ ಈ ಬೀಜಗಳ ಉಲ್ಲೇಖವಿದೆ. ಈ ಬೀಜಗಳ ತಿರುಳನ್ನು ಕೆಲವು ರೀತಿಯ ಮಾನಸಿಕ ಅಸ್ವಸ್ಥತೆಗಳಿಗೆ ಬಳಸಲಾಗುತ್ತದೆ.

ಇವುಗಳನ್ನು ಪೂಜೆಗಳಲ್ಲಿಯೂ ಬಳಸುತ್ತಾರೆ. ಈ ಬೀಜಗಳನ್ನು ದೀಪಾವಳಿ, ಅಕ್ಷಯತೃತೀಯ ಹಬ್ಬದಂದು ಪೂಜಿಸಿ ಕುಂಕುಮದೊಂದಿಗೆ ಕೆಂಪು ಬಟ್ಟೆಯಲ್ಲಿ ಇಟ್ಟು ಗಲ್ಲಪೆಟ್ಟಿಗೆ (ನಗದು ಪೆಟ್ಟಿಗೆ) ಇರಿಸಿದರೆ ಸಂಪತ್ತು ಅಭಿವೃದ್ಧಿಗೊಳ್ಳುತ್ತದೆ ಎಂಬ ನಂಬಿಕೆಯಿದೆ. ಲಕ್ಷ್ಮಿ ಕಟಾಕ್ಷವು ಸಂತೋಷ ಮತ್ತು ನೆಮ್ಮದಿಯನ್ನು ತರುತ್ತದೆ. ಗುಲಗಂಜಿ ಬೀಜಗಳು ಕೆಟ್ಟ ದೃಷ್ಟಿ ಮತ್ತು ದುಷ್ಪರಿಣಾಮಗಳನ್ನು ಹೋಗಲಾಡಿಸುವ ಗುಣಗಳನ್ನು ಹೊಂದಿವೆ. ಈ ಬೀಜಗಳು ಹಸಿರು, ಬಿಳಿ, ಕೆಂಪು, ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿಯೂ ಲಭ್ಯವಿವೆ. ಕೆಂಪು ಮತ್ತು ಕಪ್ಪು ಹೊರತುಪಡಿಸಿ, ಇತರ ಬಣ್ಣಗಳು ಬಹಳ ಅಪರೂಪ.

ಗುಲಗಂಜಿ ಬೀಜಗಳು ಗ್ರಹ ದೋಷ ಪರಿಹಾರಗಳು

  • ಬಿಳಿ ಬಣ್ಣದ ಬೀಜಗಳು “ಶುಕ್ರಗ್ರಹ” ದೋಷಕ್ಕೆ ಪರಿಹಾರವಾಗಿದೆ
  • ಕೆಂಪು ಬಣ್ಣದ ಬೀಜಗಳು “ಕುಜಗ್ರಹ” ದೋಷ ಪರಿಹಾರ
  • ಕಪ್ಪು ಬಣ್ಣದ ಬೀಜಗಳು “ಶನಿಗ್ರಹ” ದೋಷವನ್ನು ಗುಣಪಡಿಸುತ್ತವೆ
  • ಹಳದಿ ಬಣ್ಣದ ಬೀಜಗಳು “ಗುರುಗ್ರಹ” ದೋಷ ಪರಿಹಾರ
  • ಹಸಿರು ಬೀಜಗಳು “ಬುಧಗ್ರಹ” ದೋಷಕ್ಕೆ ಪರಿಹಾರವಾಗಿದೆ

ಈ ಬೀಜಗಳಲ್ಲಿ ಆಭರಣಗಳನ್ನು ತಯಾರಿಸಿ ಧರಿಸಬಹುದು. ಮಕ್ಕಳನ್ನು ದುಷ್ಟ ಕಣ್ಣಿನಿಂದ ರಕ್ಷಿಸಲು ಕೊರಳಿಗೆ ಕಟ್ಟುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!