ವಿಶ್ವ ಸ್ತನ್ಯಪಾನ ಸಪ್ತಾಹ : ಮಗುವಿನ ಉತ್ತಮ ಆರೋಗ್ಯಕ್ಕೆ ಎದೆಹಾಲೇ ಅಮೃತ, ಇದಕ್ಕೆ ಪರ್ಯಾಯವೇ ಇಲ್ಲ!

ವಿ.ಬಿ.ಕುಳಮರ್ವ, ಕುಂಬ್ಳೆ 

“ಇಂದಿನ ಮಕ್ಕಳೇ ಮುಂದಿನ ಜನಾಂಗ” ಎಂಬ ನುಡಿಮುತ್ತನ್ನರಿಯದವರಿಲ್ಲ.ಮಕ್ಕಳು ಭವಿಷ್ಯದಲ್ಲಿ ಆರೋಗ್ಯವಂತ ಸತ್ಪ್ರಜೆಗಳಾಗಿ ಬಾಳಿ ದೇಶಸೇವೆಯಲ್ಲಿ ತೊಡಗಬೇಕಾದರೆ ಅವರಿಗೆ ಪೌಷ್ಟಿಕಾಂಶವುಳ್ಳ ನೈಸರ್ಗಿಕ ಆಹಾರ ಅಗತ್ಯವಾಗಿದೆ.ಇಡಿಯ ಜಗತ್ತಿನ ವೈಜ್ಞಾನಿಕ ನಂಬುಗೆಯ ಪ್ರಕಾರ ಮಕ್ಕಳಿಗೆ ತಾಯ ಮೊಲೆಹಾಲಿನಷ್ಟು ಪೌಷ್ಟಿಕಾಂಶವುಳ್ಳ ಆಹಾರ ಇನ್ನೊಂದಿಲ್ಲ.ಮಗುವಿನ ಉತ್ತಮ ಆರೋಗ್ಯಕ್ಕೆ ತಾಯಿಯ ಎದೆಹಾಲೇ ಅಮೃತ. ಅದಕ್ಕೆ ಪರ್ಯಾಯ ಬೇರೊಂದಿಲ್ಲ.

Breastfeeding and SIDS - The Lullaby Trustಶಿಶುವಿಗೆ ಎದೆಹಾಲೂಡಿಸುವುದು ತನ್ನ ಪರಮಕರ್ತವ್ಯ ಹಾಗೂ ಧರ್ಮ ಎಂಬ ಸತ್ಯ ಎಲ್ಲ ತಾಯಂದಿರಿಗೂ ತಿಳಿದಿದೆ. “ಕುಪುತ್ರೋ ಜಾಯತೇ,ಕ್ವಚಿದಪಿ ಕುಮಾತಾ ನ ಭವತಿ” ಎಂದು ಆಚಾರ್ಯ ಶಂಕರರೇ ತಾಯಿಯ ಮಹತ್ವವನ್ನು ಲೋಕಕ್ಕೆ ಸಾರಿದ್ದಾರೆ. ಆದರೂ ಕೆಲವು ಸಂದರ್ಭಗಳಲ್ಲಿ ತಾಯಂದಿರಿಗೆ ಕೆಲಸದೊತ್ತಡದಿಂದಲೋ ಸೌಂದರ್ಯಪ್ರಜ್ಞೆಯಿಂದಲೋ ಅಥವಾ ಇನ್ನಾವುದೋ ಅನಿವಾರ್ಯ ಕಾರಣಗಳಿಂದಲೋ ಮಗುವಿಗೆ ಎದೆಹಾಲೂಡಿಸುವಿಕೆಯ ಕ್ರಿಯೆ ಅಸ್ತವ್ಯಸ್ತವಾಗಬಹುದು! ಇದು ಭವಿಷ್ಯದಲ್ಲಿ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು.ಈ ನಿಟ್ಟಿನಲ್ಲಿ ನವಜಾಗೃತಿಯನ್ನುಂಟುಮಾಡುವುದಕ್ಕಾಗಿ ಸರಕಾರಗಳ ಆರೋಗ್ಯ ಇಲಾಖೆಗಳು ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.ಈ ದಿಸೆಯಲ್ಲಿ “ವಿಶ್ವ ಸ್ತನ್ಯಪಾನ ಸಪ್ತಾಹವು” ಒಂದು ಜಾಗತಿಕ ಕ್ರಾಂತಿಯಾಗಿದೆ.

Harmonizing breastfeeding & pumping: Craft a schedule that worksಉದ್ದೇಶ ಹಾಗೂ ಮಹತ್ವ
ಆಗಸ್ಟ್ ತಿಂಗಳ ಪ್ರಥಮ ವಾರ ಆಚರಿಸಲ್ಪಡುವ ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ದೇಶವು ಮಕ್ಕಳಿಗೆ ಸ್ತನ್ಯಪಾನವನ್ನು ಮಾಡಿಸಲು ಮಾತೆಯರನ್ನು ಪ್ರೋತ್ಸಾಹಿಸುವುದೇ ಆಗಿದೆ. ವಿಶ್ವದ 120 ಕ್ಕೂ ಅಧಿಕ ದೇಶಗಳಲ್ಲಿ ಈ ಜಾಗತಿಕ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. ಸ್ತನ್ಯಪಾನವನ್ನು ಪ್ರೋತ್ಸಾಹಿಸಲು 1990ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ‘ಯುನಿಸೆಫ್’ ನ ನೀತಿ ನಿರೂಪಕರು ಹೊರಡಿಸಿದ ಘೋಷಣೆಯ ಪ್ರಕಾರ ಈ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಕುರಿತು ಭಾರತದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಲು ‘Breast feeding promotion network of India’ ಎಂಬ ಸಂಸ್ಥೆ ಈ ಹಿಂದೆಯೇ ಕಾರ್ಯಪ್ರವೃತ್ತವಾಗಿದೆ.

ಶಿಶುವು ಜನಿಸಿದ ತಕ್ಷಣ ಅದಕ್ಕೆ ಎದೆಹಾಲೂಡುವುದನ್ನು ಆರಂಭಿಸಬೇಕು.ಇದಕ್ಕೆ ನಾಲ್ಕು ಪ್ರಮುಖ ಕಾರಣಗಳಿವೆ. ಮಗುವು ಮೊದಲ 30 ರಿಂದ 60 ನಿಮಿಷಗಳ ಕಾಲ ಅತ್ಯಂತ ಚಟುವಟಿಕೆಯಿಂದಿರುತ್ತದೆ. ಈ ಸಮಯದಲ್ಲಿ ಮಗುವಿನ ಹೀರುವಿಕೆಯ ಪ್ರಕ್ರಿಯೆಯು ಅತ್ಯಂತ ಹೆಚ್ಚಿರುತ್ತದೆ. ಬೇಗ ಪ್ರಾರಂಭಿಸಿದಷ್ಟೂ ಯಶಸ್ವೀ ಎದೆಹಾಲೂಡಿಸುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

Breastfeeding | MouthHealthy - Oral Health Information from the ADA ಮೊದಲ ಹಾಲು ಎದೆಯಿಂದ ಬರುವ ಹಳದಿ ದ್ರವವಾಗಿರುತ್ತದೆ. ಅದನ್ನೇ ಮಗುವಿಗೆ ಮೊದಲು ಕುಡಿಸಬೇಕು.ಮಗುವನ್ನು ಸೋಂಕುರೋಗಗಳಿಂದ ರಕ್ಷಿಸುವ ದಿವ್ಯಶಕ್ತಿ ಆ ದ್ರವಕ್ಕಿದೆ. ಇದು ಬಹುತೇಕ ರೋಗನಿರೋಧಕ ಲಸಿಕೆಯಿದ್ದಂತೆ. ಹೀಗೆ ಮಾಡುವುದರಿಂದ ತಾಯಿಗೆ ಎದೆನೋವು ಬರುವುದಿಲ್ಲ ಮತ್ತು ಹೆರಿಗೆಯ ಅನಂತರದ ರಕ್ತಸ್ರಾವವೂ ಕಡಿಮೆಯಾಗುತ್ತದೆ. ಆದರೆ ಕೆಲವು ಮೂಢನಂಬಿಕೆಯುಳ್ಳವರು ಈ ಅಮೃತವನ್ನು ಚೆಲ್ಲಿಬಿಡುತ್ತಾರೆ!

ತಾಯಿಯು ಟೈಫಾಯ್ಡ್ ,ಮಲೇರಿಯಾ , ಕ್ಷಯ , ಜಾಂಡೀಸ್ ,ಕುಷ್ಟ ಅಥವಾ ಇನ್ನಿತರ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೂ ಶಿಶುವಿಗೆ ಎದೆಹಾಲೂಡುವುದನ್ನು ನಿಲ್ಲಿಸುವ ಅಗತ್ಯವಿಲ್ಲ. ಸಿಸೇರಿಯನ್ ಮೂಲಕ ಹೆರಿಗೆಯಾದವರು ಕೂಡಾ ಶಸ್ತ್ರಚಿಕಿತ್ಸೆಯಾದ ನಾಲ್ಕು ತಾಸುಗಳಲ್ಲಿ ಶಿಶುವಿಗೆ ಎದೆಹಾಲನ್ನು ತನಗೆ ಸುಲಭಸಾಧ್ಯವಿರುವ ಯಾವುದೇ ಭಂಗಿಯಲ್ಲಿ ಮಲಗಿ ನೀಡಬಹುದು.

Are there benefits to breastfeeding until the age of five? - BBC Newsಪ್ರಯೋಜನಗಳು
ಎದೆಹಾಲೂಡುವುದರಿಂದ ದೊರಕುವ ಪ್ರಯೋಜನಗಳು ಅಷ್ಟಿಷ್ಟಲ್ಲ! ಇದರಿಂದ ತಾಯಿಗೆ ಸಂಪೂರ್ಣ ಸಂತೃಪ್ತಿ ಹಾಗೂ ಸಮಾಧಾನ ದೊರೆಯುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಗೆ ಇದು ಪೂರಕವಾಗಿದೆ. ಮಾತ್ರವಲ್ಲ ರಕ್ತಸ್ರಾವ ಹಾಗೂ ರಕ್ತಹೀನತೆಗಳನ್ನೂ ಇದು ತಡೆಗಟ್ಟುತ್ತದೆ. ಮಗುವಿಗೆ ಮೊದಲ ಆರು ತಿಂಗಳುಗಳಲ್ಲಿ ಅತ್ಯಂತ ಪೌಷ್ಟಿಕಾಹಾರವಾದ ಎದೆಹಾಲನ್ನು ಮಾತ್ರ ನೀಡಬೇಕು. ಅದು ಸುಲಭವಾಗಿ ಜೀರ್ಣವಾಗುವುದರಿಂದ ಮಗುವಿಗೆ ಮಲಬದ್ಧತೆಯುಂಟಾಗುವುದಿಲ್ಲ.,ವಾಂತಿ ಭೇದಿಗಳ ಸಮಸ್ಯೆಯೂ ಬರುವುದಿಲ್ಲ.

ಅಸ್ತಮಾ ಮತ್ತು ಕಿವಿಯ ಸೋಂಕಿನಿಂದಲೂ ಮಗುವನ್ನು ಎದೆಹಾಲು ರಕ್ಷಿಸುತ್ತದೆ. ಮೂಗು ಮತ್ತು ಬಾಯಲ್ಲಿ ಲೋಳೆ ಪದರವನ್ನು ಸೃಷ್ಟಿಮಾಡುವ ಮೂಲಕ ಅದು ಸೋಂಕನ್ನು ದೂರವಿರಿಸಬಲ್ಲುದು. ಎದೆಹಾಲು ನೂರಕ್ಕೆ ನೂರೂ ಸುರಕ್ಷಿತ. ಅದನ್ನು ಕುಡಿದ ಮಕ್ಕಳ ಬುದ್ಧಿಮತ್ತೆ ವೃದ್ಧಿಸುತ್ತದೆ. ಅವರು ದೊಡ್ಡವರಾದಾಗ ರಕ್ತಾರ್ಬುದ, ಟೈಫಾಯ್ಡ್, ಮಧುಮೇಹ,ಮತ್ತು ರಕ್ತದೊತ್ತಡಗಳಿಂದ ಬಳಲುವ ಸಂದರ್ಭ ಕಡಿಮೆ.

Restarting Breastfeeding: Relactation Tips – Cleveland Clinicಗರ್ಭಧಾರಣೆಯ ಅವಧಿಯಲ್ಲಿ ತೂಕಹೆಚ್ಚಾಗಿದ್ದ ಮಹಿಳೆಯು ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ಶೀಘ್ರವಾಗಿ ಸಾಮಾನ್ಯ ಸ್ಥಿತಿಗೆ ಬರುತ್ತಾಳೆ.,ಮಾತ್ರವಲ್ಲ ಸ್ತನ ಮತ್ತು ಅಂಡಾಣು ಕ್ಯಾನ್ಸರ್ ಗಳ ಅಪಾಯವೂ ಕಡಿಮೆಯಾಗುವುದು.ದುಬಾರಿ ಫಾರ್ಮುಲಾಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಖರ್ಚಿನದ್ದು ಎದೆಹಾಲು.

ಎದೆಹಾಲೂಡುವ ಪ್ರಕ್ರಿಯೆಯಿಂದ ತಾಯಿ ಮತ್ತು ಮಗುವಿಗೆ ದೈಹಿಕ ಆಲಿಂಗನದ ಆನಂದವೂ ಅವ್ಯಕ್ತ ಸುಖವೂ ದೊರಕುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಗುವಿನ ಸರ್ವತೋಮುಖವಾದ ಆರೋಗ್ಯಕ್ಕೆ ಎದೆಹಾಲೇ ಅತ್ಯುತ್ತಮ ಎಂಬ ಸತ್ಯವನ್ನು ತಾಯಂದಿರು ಮನಗಾಣುವುದು ಅಗತ್ಯ.

ಇದಕ್ಕೆ ಪೂರಕವಾಗಿ ಹತ್ತು ಉಪಯುಕ್ತ ಮಾರ್ಗಸೂಚಿಗಳನ್ನು ಅಖಿಲ ಭಾರತೀಯ ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಂಘದವರು ನೀಡಿದ್ದು ತಾಯಿ , ಕುಟುಂಬ ಹಾಗೂ ಸಮಾಜ ಈ ನಿಟ್ಟಿನಲ್ಲಿ ಯಾವರೀತಿ ಸಹಕರಿಸಬೇಕೆಂಬ ಬಗ್ಗೆಯೂ ಬಹಳ ವಿವರವಾದ ಮಾಹಿತಿಗಳನ್ನು ನೀಡುತ್ತಾರೆ.

11 Benefits of Breastfeeding for Both Mom and Babyಮಾತೆ-ದಾತೆ
ಇತ್ತೀಚೆಗೆ ಅಂತರ್ಜಾಲ ಆಧರಿತ ಮಾರುಕಟ್ಟೆಯಲ್ಲಿ ತಾಯಿಯ ಮೊಲೆಹಾಲಿನ ಮಾರಾಟ ಒಂದು ಉದ್ಯಮವಾಗಿ ಬೆಳೆಯುತ್ತದೆ.ಅಂದಹಾಗೆ ಎದೆಹಾಲು ಮಕ್ಕಳಿಗೆ ಮಾತ್ರವಲ್ಲ ದೇಹದಾರ್ಢ್ಯ ಸ್ಪರ್ಧಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ನ್ಯಾಚುರಲ್ ಸೂಪರ್ ಫುಡ್ ರೀತಿಯಲ್ಲಿ ಗುರುತಿಸಿಕೊಂಡಿದ್ದು ವ್ಯಾಪಕವಾಗಿ ಮಾರಾಟವಾಗುತ್ತದೆ ಎಂದು ನ್ಯೂಯಾರ್ಕಿನ ‘Breast feeding medicine’ ಎಂಬ ಪತ್ರಿಕೆಯ ಸಂಪಾದಕೀಯ ತಿಳಿಸಿದೆ.

ತಾಯಿ ತನ್ನ ಮೈಮೇಲೆ ಹಚ್ಚೆ ಹಾಕಿಸಿಕೊಂಡರೆ , ಅತಿಯಾಗಿ ಮದ್ಯಪಾನ ಮಾಡಿದ್ದರೆ ಆಕೆಯ ಎದೆಹಾಲೇ ಹಾಲಾಹಲವಾಗುವ ಸಾಧ್ಯತೆಯಿದೆಯೆಂದು ಆಸ್ಟ್ರೇಲಿಯಾದ ನ್ಯಾಯಾಲಯವು ಕೆಲವು ವರ್ಷಗಳ ಹಿಂದೆಯೇ ತೀರ್ಮಾನಕ್ಕೆ ಬಂದು ಅಂತಹ ತಾಯಿ ಎದೆಹಾಲು ನೀಡಬಾರದೆಂದು ಆಜ್ಞಾಪಿಸಿದೆ. ಏನೇ ಇರಲಿ , ತಾಯಿಯ ಎದೆಹಾಲೇ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮೂಲಕಾರಣವೆಂಬುದರಲ್ಲಿ ಅನುಮಾನವಿಲ್ಲ.

Breastfeeding Diet - What to Eat While Breastfeeding - Moms Into Fitness

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!