Monday, March 27, 2023

Latest Posts

ಮೂರನೇ ತ್ರೈಮಾಸಿಕ ಲಾಭದಲ್ಲಿ 5 ಶೇಕಡಾ ಹೆಚ್ಚಳ ದಾಖಲಿಸಿದ ಎನ್‌ಟಿಪಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸರ್ಕಾರಿ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿ ಎನ್‌ಟಿಪಿಸಿ ಶನಿವಾರ ಡಿಸೆಂಬರ್ ತ್ರೈಮಾಸಿಕದಲ್ಲಿ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಸುಮಾರು ಶೇಕಡಾ 5 ರಷ್ಟು ಏರಿಕೆ ದಾಖಲಿಸಿದ್ದು 4,854.36 ಕೋಟಿ ರೂ ಲಾಭವನ್ನು ವರದಿ ಮಾಡಿದೆ. ಮುಖ್ಯವಾಗಿ ಎನ್‌ಟಿಪಿಸಿಯ ಆದಾಯದಲ್ಲಿ ಏರಿಕೆ ದಾಖಲಾಗಿದೆ.

BSE ಫೈಲಿಂಗ್‌ನ ಪ್ರಕಾರ, ಡಿಸೆಂಬರ್ 31, 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭವು ₹4,626.11 ಕೋಟಿಯಾಗಿದೆ.

ತ್ರೈಮಾಸಿಕದಲ್ಲಿ ಒಟ್ಟು ಆದಾಯ ಹಿಂದಿನ ವರ್ಷದ ಇದೇ ಅವಧಿಯ 33,783.62 ಕೋಟಿ ರೂ.ನಿಂದ 44,989.21 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕರ ಮಂಡಳಿಯು 2022-23 ಹಣಕಾಸು ವರ್ಷಕ್ಕೆ 10 ರು.ಪಾವತಿಸಿದ ಈಕ್ವಿಟಿ ಷೇರುಗಳ ಮುಖಬೆಲೆಯ ಮೇಲೆ 42.50 ಶೇಕಡಾ (ಪ್ರತಿ ಷೇರಿಗೆ 4.25 ರೂ.) ದರದಲ್ಲಿ ಮಧ್ಯಂತರ ಲಾಭಾಂಶವನ್ನು ಪಾವತಿಸಲು ನಿರ್ಧರಿಸಿದೆ.

2022 ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಕಂಪನಿಯ ಸರಾಸರಿ ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 4.96 ರೂಪಾಯಿಯಾಗಿದ್ದು ಇದು ಒಂದು ವರ್ಷದ ಹಿಂದೆ ಪ್ರತಿ ಯೂನಿಟ್‌ಗೆ 3.95 ರೂಪಾಯಿಯಷ್ಟಿತ್ತು.

ಆಮದು ಮಾಡಿಕೊಂಡ ಕಲ್ಲಿದ್ದಲು ಪೂರೈಕೆಯು ತ್ರೈಮಾಸಿಕದಲ್ಲಿ 1.57 MMT ಗೆ ಏರಿದೆ, ಇದು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 0.52 MMT ಆಗಿತ್ತು.
ಕಂಪನಿಯ ಒಟ್ಟು ವಿದ್ಯುತ್ ಉತ್ಪಾದನೆಯು ಮೂರನೇ ತ್ರೈಮಾಸಿಕದಲ್ಲಿ 78.64 ಬಿಲಿಯನ್ ಯುನಿಟ್‌ಗಳಿಗೆ (ಬಿಯು) ಏರಿದೆ, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 75.67 ಬಿಯು ಇತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!