ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಂಗ್ ಟೈಗರ್ ಜ್ಯೂ.ಎನ್ಟಿಆರ್ ಆರ್‌ಆರ್‌ಆರ್ ಚಿತ್ರದ ಮೂಲಕ ಜಾಗತಿಕ ಸ್ಟಾರ್ ನಟರ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಈಗಾಗಲೇ ಹಲವು ಪ್ರಶಸ್ತಿ, ಗೌರವಗಳನ್ನು ಪಡೆದಿರುವ ಈ ನಾಯಕನಿಗೆ ಇತ್ತೀಚೆಗೆ ಮತ್ತೊಂದು ಗೌರವ ಸಿಕ್ಕಿದೆ. ಆಸ್ಕರ್ ತನ್ನ ಹೊಸ ಸದಸ್ಯರ ಪಟ್ಟಿಯನ್ನು ಇಂದು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಜ್ಯೂ.ಎನ್ಟಿಆರ್ ಹೆಸರಿದೆ. ಈ ಬಗ್ಗೆ ಸ್ವತಃ ಅಕಾಡೆಮಿ ಸಮಿತಿಯೇ ಪೋಸ್ಟ್ ಮಾಡಿದೆ.
ಬ್ರಾಂಚ್‌ನ ಸದಸ್ಯರಾಗಿ ಅಕಾಡೆಮಿಯು ಎನ್‌ಟಿಆರ್‌ಗೆ ಅಪರೂಪದ ಗೌರವವನ್ನು ನೀಡಿತು. ಈ ವಿಷಯ ತಿಳಿದ ಅಭಿಮಾನಿಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು, ನಿಮ್ಮನ್ನು ಕಂಡರೆ ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.
ಈ ಹಿಂದೆ ಅಕಾಡೆಮಿ ತನ್ನ ಹೊಸ ಸದಸ್ಯರ ಪಟ್ಟಿಯನ್ನು ಸಹ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಭಾರತದ 8 ಮಂದಿ ಸ್ಥಾನ ಪಡೆದಿದ್ದರು ಅವರಲ್ಲಿ 6 ಮಂದಿ RRR ಚಿತ್ರತಂಡಕ್ಕೆ ಸೇರಿದವರಾಗಿದ್ದು, ಇನ್ನಿಬ್ಬರು ಕರಣ್ ಜೋಹರ್ ಮತ್ತು ಶೌನಕ್ ಸೇನ್ ಆಗಿದ್ದಾರೆ. ಆರ್‌ಆರ್‌ಆರ್ ಚಿತ್ರತಂಡದಿಂದ ಎನ್‌ಟಿಆರ್, ಚರಣ್, ಡಿಒಪಿ ಸೆಂಥಿಲ್ ಕುಮಾರ್, ಪ್ರೊಡಕ್ಷನ್ ಡಿಸೈನರ್ ಸಾಬು ಸಿರಿಲ್, ಸಂಗೀತ ನಿರ್ದೇಶಕ ಕೀರವಾಣಿ ಮತ್ತು ಗೀತರಚನೆಕಾರ ಚಂದ್ರ ಬೋಸ್ ಇದ್ದಾರೆ. ಇದೀಗ ಎನ್‌ಟಿಆರ್ ಅವರನ್ನು ನಟರ ವರ್ಗದ ಸದಸ್ಯ ಎಂದು ಘೋಷಿಸಲಾಯಿತು.