ಹೊಸದಿಗಂತ ವರದಿ ನಾಪೋಕ್ಲು:
ಮನೆ..ಮನೆ ಭೇಟಿ ಮಾಡಿ ಹಿಂತಿರುಗುವಾಗ ನಾಯಿಯೊಂದು ಕಚ್ಚಿ ಗಂಭೀರ ಗಾಯಗಳಿಂದ ನರ್ಸ್ ಒಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ನಡೆದಿದೆ.
ಇಲ್ಲಿಗೆ ಸಮೀಪದ ಪಾರಾಣೆ-ಕೊಣಂಜಗೇರಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್ ಬೆಲೆಮನೆ ಭವ್ಯಾ ಎಂಬಾಕೆ ಗ್ರಾಮದಲ್ಲಿ ಇತ್ತೀಚೆಗೆ ಹೆರಿಗೆಯಾದ ಮಹಿಳೆಯ ಆರೋಗ್ಯ ತಪಾಸಣೆಗಾಗಿ ಭೇಟಿ ಮಾಡಿ ವಾಪಸಾಗುವಾಗ ಆ ಮನೆಯಲ್ಲಿದ್ದ ಸಾಕು ನಾಯಿ ದಾಳಿ ನಡೆಸಿದೆ.
ಘಟನೆಯಲ್ಲಿ ನರ್ಸ್ ಭವ್ಯಾ ಅವರ ಭುಜಕ್ಕೆ ಗಂಭೀರ ಗಾಯವಾಗಿದ್ದು, ವಿಷಯ ತಿಳಿದ ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ, ಗಾಯಗೊಂಡ ನರ್ಸ್ ಅವರನ್ನು ನಾಪೋಕ್ಲು ಪಟ್ಟಣಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದರು.