ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ನಟಿ ರಾಣಿ ಮುಖರ್ಜಿ ಹಾಗೂ ಅಕ್ಷಯ್ ಕುಮಾರ್ `ಓ ಮೈ ಗಾಡ್-3′ ಸಿನಿಮಾಗಾಗಿ ಒಂದಾಗ್ತಿದ್ದಾರೆ. 2026 ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅಕ್ಷಯ್ ಹಾಗೂ ರಾಣಿ ಮುಖರ್ಜಿ.
ಅಂದಹಾಗೆ ಓ ಮೈ ಗಾಡ್ ಸಿನಿಮಾ ಈಗಾಗ್ಲೇ ಪಾರ್ಟ್-1 ಹಾಗೂ ಪಾರ್ಟ್-2 ಗಳಲ್ಲಿ ಸಖತ್ ಸೌಂಡ್ ಮಾಡಿದೆ. ಇದೀಗ ಓ ಮೈ ಗಾಡ್ ಪಾರ್ಟ್-3 ಸಿನಿಮಾ ಇದೇ ವರ್ಷ ಸೆಟ್ಟೇರಲಿದೆ.
ಅಕ್ಷಯ್ ಕುಮಾರ್ ಜೊತೆಗೆ ರಾಣಿ ಮುಖರ್ಜಿ ಕೈಜೋಡಿಸುತ್ತಿದ್ದಾರೆ. ಈ ಸುದ್ದಿ ಹೊಸ ವರ್ಷದ ಹೊಸ್ತಿಲಲ್ಲಿ ಸಖತ್ ಸದ್ದು ಮಾಡ್ತಿದೆ. ಜೂನ್ ಅಥವಾ ಜುಲೈನಲ್ಲಿ ಶೂಟಿಂಗ್ ಶುರುವಾಗಲಿದೆ ಅಂತ ಹೇಳಲಾಗ್ತಿದೆ.

