ರಿಯಾಲಿಟಿ ಶೋನಲ್ಲಿ ಅಶ್ಲೀಲ ಕ್ಲಿಪ್: ಸಮನ್ಸ್‌ ನೀಡಿದ NCW

ಹೊಸದಿಗಂತ ಡಿಜಿಟಲ್ ಡೆಸ್ಕ್:

Ullu ಆ್ಯಪ್‌ನ ರಿಯಾಲಿಟಿ ಶೋ ‘House Arrest’ ನ ಕ್ಲಿಪ್ ಅಶ್ಲೀಲವಾಗಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಈ ಆ್ಯಪ್ ಬ್ಯಾನ್ ಆಗಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಇದರ ನಡುವೆ, ರಾಷ್ಟ್ರೀಯ ಮಹಿಳಾ ಆಯೋಗ (NCW) ಎಜಾಜ್ ಖಾನ್ ಮತ್ತು ಉಲ್ಲು ಆಪ್ ಸಿಇಒ ವಿಭು ಅಗರ್ವಾಲ್ ಅವರಿಗೆ ಸಮನ್ಸ್ ಕಳುಹಿಸಿದ್ದಲ್ಲದೆ, ಕಾರ್ಯಕ್ರಮದ ಅಶ್ಲೀಲ ವಿಷಯದ ಬಗ್ಗೆ NCW ಸ್ವಯಂಪ್ರೇರಿತ ದೂರು ದಾಖಲಿಸಿದೆ.

ನಟ ಏಜಾಜ್ ಖಾನ್ ಅವರು ನಡೆಸಿಕೊಡುವ ‘ಹೌಸ್ ಅರೆಸ್ಟ್’ ರಿಯಾಲಿಟಿ ಶೋನಲ್ಲಿ ಲೈಂಗಿಕ ಭಂಗಿಗಳ ಪ್ರದರ್ಶನ ಮಾಡಲಾಗುತ್ತಿದೆ. ಹೀಗಾಗಿ ಅಶ್ಲೀಲತೆಯನ್ನು ಹರಡಿದ್ದಕ್ಕಾಗಿ ಮತ್ತು ಸಾಮಾಜಿಕ ಸಭ್ಯತೆ ಉಲ್ಲಂಘಿಸಿದ್ದಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗ ಈ ಕಾರ್ಯಕ್ರಮವನ್ನು ಟೀಕಿಸಿದೆ. NCW ಅಜಾಜ್‌ ಖಾನ್ ಮತ್ತು ವಿಭು ಅಗರ್ವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಮೇ 9ರ ಒಳಗಾಗಿ ಉತ್ತರ ನೀಡಬೇಕು ಎಂದು ತಿಳಿಸಿದೆ.

ಈ ಹಿಂದೆ, ಶಿವಸೇನೆ (ಯುಬಿಟಿ) ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಹೌಸ್ ಅರೆಸ್ಟ್ ಕಾರ್ಯಕ್ರಮದ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ಅಪ್ಲಿಕೇಶನ್‌ಗಳಲ್ಲಿ ಅಶ್ಲೀಲ ವಿಷಯವನ್ನು ನಿರಂತರವಾಗಿ ನೀಡಲಾಗುತ್ತಿದೆ ಆದರೆ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಬರೆದಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!