Monday, November 28, 2022

Latest Posts

ಯುವಕರನ್ನು ಕ್ರೀಡೆಗಳತ್ತ ಗಮನ ಸೆಳೆಯಲು ಅ. 15 ರಂದು ಫುಟ್ಬಾಲ್ ಪಂದ್ಯಾವಳಿ ಆಯೋಜನೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಭಗತಸಿಂಗ್ ಯೂಥ್ ಕ್ಲಬ್ ಹಾಗೂ ಮಹಾವೀರ ಸೇವಾ ಸಂಘ ಸಹಯೋಗದಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ಫುಟ್ಬಾಲ್ ಪಂದ್ಯಾವಳಿಯನ್ನು ಅ. 15 ರಂದು ಕುಸುಗಲ್ ರಸ್ತೆಯ ಸ್ಪೋರ್ಟ್ಸ್‌ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಂದ್ಯಾವಳಿಯ ಸಂಯೋಜಕ ಚಂದ್ರಶೇಖರ ಗೋಕಾಕ್ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಿಗೆ ಮಾನಸಿಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದ್ದು, ಒಟ್ಟು 16 ತಂಡಗಳು ಭಾಗವಹಿಸಲಿವೆ. ಲೀಗ್ ಹಾಗೂ ನಾಕ್ ಔಟ್ ಪ್ರಕಾರ ಪಂದ್ಯಗಳು ನಡೆಯಲಿವೆ ಎಂದರು.

ಪಂದ್ಯಾವಳಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ ನೀಡಲಿದ್ದು, ಅಧ್ಯಕ್ಷತೆ ತೇಜಸ್ ಗೋಕಾಕ್ ವಹಿಸಲಿದ್ದಾರೆ. ಇವರ ಜೊತೆಗೆ ಮುಖಂಡರಾದ ಮಹಾವೀರ ಸಂಘದ ಅಧ್ಯಕ್ಷ ಸುರೇಶ ಜೈನ್, ಆರ್.ಎನ್.ರಿಚರ್ಡ್, ದೀಪಕ ಬಾಬು, ಚೈತನ್ಯ ಇನಾಮದಾರ ಭಾಗವಹಿಸುವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!