ಪ್ರತಿ ತಿಂಗಳಲ್ಲಿ ಹುಟ್ಟಿದವರಿಗೂ ವಿಭಿನ್ನವಾದ ಗುಣಲಕ್ಷಣಗಳು ಇರುತ್ತದೆ. ಅವರು ಹುಟ್ಟಿದ ತಿಂಗಳ ಆಧಾರ ಮೇಲೆ ಕೆಲವೊಂದು ಗುಣಗಳು ನಿರ್ಧರಿತವಾಗುತ್ತವೆ. ಅಕ್ಟೋಬರ್‌ನಲ್ಲಿ ಹುಟ್ಟಿದವರ ಬಗ್ಗೆ ತಿಳಿದುಕೊಳ್ಳೋಕೆ ಇದನ್ನು ಓದಿ..
ಇವರು ರೊಮ್ಯಾಂಟಿಕ್ ವ್ಯಕ್ತಿಗಳು, ಪ್ರೀತಿಯಲ್ಲಿ ಬೇಗ ಬೀಳುತ್ತಾರೆ. ಇವರ ಪ್ರೀತಿಯಲ್ಲಿ ಜೀವಂತಿಕೆ ಹೆಚ್ಚು. ಪ್ರೀತಿಸಿದವರನ್ನು ಅರ್ಥಮಾಡಿಕೊಂಡು, ಅದ್ಭುತವಾಗಿ ನೋಡಿಕೊಳ್ಳುತ್ತಾರೆ.
ಎಂಥವರನ್ನು ಸೆಳೆಯುವ ಗುಣ ಇವರಲ್ಲಿದೆ. ಚಾರ್ಮಿಂಗ್ ನೋಟ ಹಾಗೂ ಗುಣಗಳು ಇವರದ್ದಾಗಿದೆ.
ಎಂಥ ಸನ್ನಿವೇಶಕ್ಕೂ ಇವರು ಪ್ಯಾನಿಕ್ ಆಗೋದಿಲ್ಲ. ತಾಳ್ಮೆಯಿಂದ ಆಲೋಚಿಸಿ ಮುಂದಿನ ನಡೆ ನಿರ್ಧರಿಸುತ್ತಾರೆ.
ಇವರು ಎಲ್ಲ ಭಾವನೆಗಳನ್ನು ಮನಸ್ಸಿನಲ್ಲೆಯೇ ಇಟ್ಟುಕೊಂಡು, ಒಂದೇ ಬಾರಿಗೆ ಬ್ಲಾಸ್ಟ್ ಆಗುತ್ತಾರೆ. ಆಗಿನ ವಿಷಯ ಆಗೆಯೇ ಬಗೆಹರಿಸುವುದಿಲ್ಲ.
ಇವರು ಛಲವಾದಿಗಳು, ಹೇಳಿದ್ದನ್ನು ಸಾಧಿಸುವವರೆಗೂ ನಿದ್ದೆ ಮಾಡದವರು. ಒಂದು ವಿಷಯದ ಮೇಲೆ ಗಮನ ಇಟ್ಟರೆ ಆಚೀಚೆ ತಲೆಹಾಕುವುದಿಲ್ಲ.
ಇವರು ಸಕಾರಾತ್ಮಕ ವ್ಯಕ್ತಿಗಳು, ಎಲ್ಲಾ ವಿಷಯದಲ್ಲಿಯೂ ಪಾಸಿಟಿವ್ ಅಂಶಗಳನ್ನೇ ಹುಡುಕುತ್ತಾರೆ. ಹಾಗಾಗಿ ಸದಾ ಖುಷಿಯಾಗಿರುತ್ತಾರೆ.
ಈ ತಿಂಗಳಲ್ಲಿ ಹುಟ್ಟಿದವರು ದುಂದುವೆಚ್ಚ ಮಾಡೋದ್ರಲ್ಲಿ ನಿಸ್ಸೀಮರು. ಎಷ್ಟು ಹಣ ಇದ್ದರೂ ಸಾಕಾಗೋದಿಲ್ಲ. ಖರ್ಚು ಮಾಡುವ ನಾನಾ ವಿಧಾನಗಳು ಇವರಿಗೆ ಗೊತ್ತು.
ಇವರ ಜಾಣ್ಮೆಗೆ ಎಲ್ಲೆಯೇ ಇಲ್ಲ. ಓದುವುದರಲ್ಲಿ, ಕೆಲಸ ಹಿಡಿಯುವುದರಲ್ಲಿ ಇವರಿಗೆ ಜಯ ಇದೆ.
ಈ ತಿಂಗಳಲ್ಲಿ ಹುಟ್ಟಿದವರು ಇಂದು ಎಂದು ಹೇಳಿ ಬದುಕುತ್ತಾರೆ. ನೆನ್ನೆ, ನಾಳೆಯ ಚಿಂತೆ ಇವರಿಗಿಲ್ಲ.
ಕರುಣಾರಸ ಇವರಲ್ಲಿ ಹೆಚ್ಚಿದೆ. ಬೇರೆಯವರ ಕಷ್ಟಕ್ಕೆ ಮರುಗುತ್ತಾರೆ. ಅಯ್ಯೋ ಪಾಪಾ ಎಂದು ದಾನ ಧರ್ಮ ಮಾಡುತ್ತಾರೆ. ಇದರಿಂದ ಇವರಿಗೆ ಒಳಿತೇ ಆಗಲಿದೆ.
ಮಾತಿನಮಲ್ಲರು, ಯಾವಾಗಲೂ ಮಾತನಾಡೋಕೆ ಇಷ್ಟ. ಗಾಸಿಪ್ ಮಾಡುವುದು ಇವರ ಸಹಜ ಗುಣ
ಯಾರಾದರೂ ಚುಚ್ಚು ಮಾತನಾಡಿದರೆ ಸುಲಭವಾಗಿ ನೋವು ಅನುಭವಿಸುತ್ತಾರೆ. ಆದರೆ ಅಷ್ಟೇ ಬೇಗ ಸರಿಯಾಗಿಬಿಡುತ್ತಾರೆ. ಮತ್ತೆ ಅವರ ಸಹವಾಸ ಮಾಡುವುದಿಲ್ಲ.
ಕಲೆ, ಸಾಹಿತ್ಯ ಹಾಗೂ ಪ್ರವಾಸ ಇವರಿಗೆ ಇಷ್ಟ. ಮನೆಯಲ್ಲಿ ಕೂರೋದು ಕಷ್ಟ.