ಏಕದಿನ ವಿಶ್ವಕಪ್: ಪಾಕ್ ಆಟಗಾರರಿಗೆ ಭಾರತ ಪ್ರವಾಸಕ್ಕೆ ವೀಸಾ ಅನುಮತಿಸಿದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದ್ದು,ಈ ವೇಳೆಆದರೆ ಭಾರತ ಪ್ರವಾಸಕ್ಕೆ ಸಜ್ಜಾಗಿದ್ದ ಪಾಕಿಸ್ತಾನಕ್ಕೆ ವೀಸಾ ಸಮಸ್ಯೆ ಎದುರಾಗಿತ್ತು.

ಇದೀಗ ಕೇಂದ್ರ ಸರ್ಕಾರ ಪಾಕಿಸ್ತಾನ ತಂಡದ ಭಾರತ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಸರ್ಕಾರ ಪಾಕಿಸ್ತಾನ ಆಟಗಾರರಿಗೆ ಭಾರತದ ವೀಸಾ ಅನುಮತಿಸಿದೆ. ಇದೀಗ ಪಾಕಿಸ್ತಾನ ತಂಡ ಸೆಪ್ಟೆಂಬರ್ 27ರಂದು ಭಾರತಕ್ಕೆ ಆಗಮಿಸಲಿದೆ.

ವಿಶ್ವಕಪ್ ಟೂರ್ನಿ ಆರಂಭಕ್ಕೂ ಕೆಲವೇ ದಿನಗಳ ಮುನ್ನ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಲಿದೆ. ಸೆಪ್ಟೆಂಬರ್ 19 ರಂದೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ಪ್ರವಾಸಕ್ಕಾಗಿ ವೀಸಾ ಅನುಮತಿ ಕೋರಿತ್ತು. ಭಾರತದ ನಿಯಮದ ಪ್ರಕಾರ ವೀಸಾ ಅನುಮತಿಸಲು 5 ವರ್ಕಿಂಗ್ ದಿನಗಳ ಅಗತ್ಯವಿದೆ. ಇದರ ನಡುವೆ ಸರ್ಕಾರಿ ರಜಾದಿನ ಹಾಗೂ ಕೆಲ ಕಾನೂನು ತೊಡಕಿನ ಕಾರಣ ವಿಳಂವಾಗಿತ್ತು. ಭಾರತ ಉದ್ದೇಶಪೂರ್ವಕವಾಗಿ ವೀಸಾ ವಿಳಂಬ ಮಾಡುತ್ತಿದೆ ಎಂದು ಪಿಸಿಬಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ನೀಡಿತ್ತು.

ಇದೀಗ ವೀಸಾ ಪಡೆದಿರುವ ಪಾಕಿಸ್ತಾನ ಆಟಗಾರರುಸೆಪ್ಟೆಂಬರ್ 26 ರಂದು ದುಬೈಗೆ ತೆರಳಿ, ಅಲ್ಲಿಂದ ಭಾರತಕ್ಕೆ ಆಗಮಿಸಲಿದ್ದಾರೆ. ಇನ್ನು ಸೆಪ್ಟೆಂಬರ್ 29 ರಂದು ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ದ ಅಭ್ಯಾಸ ಪಂದ್ಯ ಆಡಲಿದೆ.

ಪಾಕ್‌ ತಂಡ ಕೊನೆ ಬಾರಿ 2016ರಲ್ಲಿ ಭಾರತಕ್ಕೆ ಆಗಮಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here