ಫೆ. 1ರಿಂದ ಬಾಗಿಲು ತೆರೆಯಲಿದೆ ಪುರಿ ಜಗನ್ನಾಥ ದೇವಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಕಾರಣದಿಂದ ಜ.31ರವರೆಗೆ ಬಂದ್‌ ಆಗಿರುವ ಪುರಿ ಜಗನ್ನಾಥ ದೇವಾಲಯ ಫೆ.1ರಿಂದ ತೆರೆಯಲಿದೆ.
ಈ ಬಗ್ಗೆ ಪುರಿಯ ಜಿಲ್ಲಾಧಿಕಾರಿ ಸಮರ್ಥ್‌ ವರ್ಮಾ ಮಾಹಿತಿ ನೀಡಿದ್ದು, ಕೋವಿಡ್‌ ಮೂರನೇ ಅಲೆ ಭೀತಿಯಿಂದ ದೇಶದ ಬಹುತೇಕ ದೇವಾಲಯಗಳು ಬಂದ್‌ ಆಗಿದ್ದವು. ಅದರಲ್ಲಿ ಪುರಿ ಜಗನ್ನಾಥ ದೇವಾಲಯವೂ ಒಂದು. ಆದರೆ ಈಗ ಕೋವಿಡ್‌ ನಿಯಮ ಸಡಿಲಿಕೆಯಿಂದ ಭಕ್ತರಿಗೆ ಫೆ.1ರಿಂದ ಜಗನ್ನಾಥನ ದರ್ಶನ ಸಿಗಲಿದೆ ಎಂದರು.
ಮುಂದಿನ ದಿನಗಳಲ್ಲಿಯೂ ದೇವಸ್ತಾನದಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸಲಿದ್ದು, ಪ್ರತಿ ಭಾನುವಾರ ಸ್ಯಾನಿಟೈಸೇಷನ್‌ ಗಾಗಿ ದೇವಸ್ಥಾನ ಬಂದ್‌ ಮಾಡಲಾಗುವುದು.
ಇನ್ನು ದೇವಸ್ಥಾನದಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್‌ ಲಸಿಕೆ ಹಾಗೂ 72 ಗಂಟೆಯೊಳಗಿನ ಆರ್ಟಿಪಿಸಿಆರ್‌ ವರದಿ ತರಬೇಕು ಎಂದರು.
ರಾಜ್ಯದಲ್ಲಿ ಹಾಗೂ ದೇವಸ್ಥಾನದ ಸಿಬ್ಬಂದಿಯಲ್ಲಿ ಕೋವಿಡ್‌ ಪತ್ತೆಯಾದ ಕಾರಣ ಜ.10ರಿಂದ ಜ.31ರವರೆಗೆ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ರದ್ದುಗೊಳಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!