ಎಲೆಕ್ಟ್ರಿಕ್ ಬೈಕ್ ವಿಭಾಗದಲ್ಲಿ ಟಿವಿಎಸ್ ಚಮಕ್, ಸ್ವಿಸ್ ಕಂಪನಿಯ ಶೇ. 75 ಪಾಲು ಖರೀದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಎಲೆಕ್ಟ್ರಿಕ್ ಸಂಚಾರ ವ್ಯವಸ್ಥೆ ಭವಿಷ್ಯದ ಸಾಗಾಟ ವಾಸ್ತವ ಎಂಬುದು ಚರ್ಚೆಯಾಗುತ್ತಿರುವ ಈ ದಿನಗಳಲ್ಲಿ ಭಾರತದ ಟಿವಿಎಸ್ ಕಂಪನಿ ಸ್ವಿಟ್ಜರ್ಲೆಂಡಿನ ವಿದ್ಯುತ್ ಬೈಕ್ ಕಂಪನಿಯೊಂದರ ಶೇ. 75 ಪಾಲನ್ನು ಖರೀದಿಸುವ ಮೂಲಕ ಮುಂಬರುವ ದಿನಗಳಲ್ಲಿ ತಾನೂ ಈ ಆಟದಲ್ಲಿ ದೊಡ್ಡಪಾತ್ರ ವಹಿಸಲಿದ್ದೇನೆಂಬ ಸೂಚನೆ ನೀಡಿದೆ.

ಸ್ವಿಟ್ಜರ್ಲೆಂಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ಅಂಗಸಂಸ್ಥೆ ಮೂಲಕ ಸಂಪೂರ್ಣ ನಗದು ಪ್ರಕ್ರಿಯೆಯಲ್ಲೇ ಈ ಒಪ್ಪಂದವನ್ನು ನೇರವೇರಿಸಿಕೊಳ್ಳಲಾಗಿದೆ.

“ಸುಸ್ಥಿರತೆ ಮೇಲೆ ನಂಬಿಕೆ ಇರಿಸಿರುವ ಕಂಪನಿ ಕಳೆದ 10 ವರ್ಷಗಳಿಂದ ಎಲೆಕ್ಟ್ರಿಕ್ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡುತ್ತಲೇ ಇದೆ.” ಎಂದು ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ಹೇಳಿದ್ದಾರೆ.

ಈ ಸ್ವಾಧೀನ ಪ್ರಕ್ರಿಯೆಯಿಂದ ಒಟ್ಟಾರೆ ಎಲೆಕ್ಚ್ರಿಕ್ ಸಂಚಾರದ ವೈಯಕ್ತಿಕ ವಾಹನ ವಿಭಾಗದಲ್ಲಿ ಟಿವಿಎಸ್ ತನ್ನನ್ನು ತಾನು ಮುಂಚೂಣಿಯಲ್ಲಿ ಇರಿಸಿಕೊಂಡಂತಾಗಿದೆ ಅಲ್ಲದೇ ಯುರೋಪಿನಲ್ಲಿ ವಹಿವಾಟು ವಿಸ್ತರಣೆ ಮಾಡುವುದರಲ್ಲೂ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!