Sunday, December 3, 2023

Latest Posts

ಒಡಿಶಾ ರೈಲು ದುರಂತ: ಪತ್ತೆಯಾಗದ 141 ಎಪಿ ಪ್ರಯಾಣಿಕರ ಗುರುತು

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಅಪಘಾತಕ್ಕೀಡಾಗಿದ್ದು, ದುರಂತ ಸಂಭವಿಸಿದೆ. ಭಾನುವಾರ ಬೆಳಗಿನ ಜಾವದವರೆಗೆ ಈ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಪ್ರದೇಶದ ರೈಲು ನಿಲ್ದಾಣದ ಬಳಿ ಇರುವ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂರಾರು ಮೃತದೇಹಗಳನ್ನು ಇಡಲಾಗಿತ್ತು. ಅದರಲ್ಲಿ ತಮ್ಮವರನ್ನು ಗುರುತಿಸಿಕೊಳ್ಳಲು ಬಂದ ಕುಟುಂಬ ಸದಸ್ಯರು ಆರ್ತನಾದ ಮುಗುಲುಮುಟ್ಟಿತ್ತು.  ಕೋರಮಂಡಲ್ ಮತ್ತು ಯಶವಂತಪುರ ಹೌರಾ ರೈಲಿನಲ್ಲಿ ಪ್ರಯಾಣಿಸಿರುವ ಆಂಧ್ರಪ್ರದೇಶದ ಪ್ರಯಾಣಿಕರ ಸಂಖ್ಯೆ ಬಯಲಾಗಿದೆ. ಅಪಘಾತದ ಸಮಯದಲ್ಲಿ ಆ ಎರಡು ರೈಲುಗಳಲ್ಲಿ ಒಟ್ಟು 479 ಜನರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಅವರಲ್ಲಿ 316 ಮಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ. 141 ಮಂದಿ ನಾಪತ್ತೆಯಾಗಿದ್ದು, 22 ಮಂದಿ ಗಾಯಗೊಂಡಿದ್ದಾರೆ.

ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ವಿಜಯವಾಡಕ್ಕೆ ಬರಬೇಕಿದ್ದ 135 ಪ್ರಯಾಣಿಕರಲ್ಲಿ ಏಳು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ 80 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಪ್ರಯಾಣ ಮಾಡದ 22 ಜನರಿದ್ದರೆ, 11 ಜನರು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಮತ್ತು ಒಂಬತ್ತು ಜನರು ತಮ್ಮ ಫೋನ್ ಲಭ್ಯವಿಲ್ಲ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.

41 ಪ್ರಯಾಣಿಕರು ವಿಜಯವಾಡದಿಂದ ಯಶವಂತಪುರ ಹೌರಾ ರೈಲಿನಲ್ಲಿ ಹೊರಟರು. ಅಪಘಾತದಲ್ಲಿ 21 ಮಂದಿ ಬದುಕುಳಿದಿದ್ದಾರೆ. ಕೊನೆಯ ಕ್ಷಣದಲ್ಲಿ ಮೂವರು ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿರುವುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಎರಡು ಫೋನ್ ನಂಬರ್ ಗಳು ಸ್ವಿಚ್ ಆಫ್ ಆಗಿದ್ದು, ಇನ್ನೆರಡು ರಾಂಗ್ ನಂಬರ್ ಗಳಾಗಿ ಬರುತ್ತಿವೆ. ಎಂಟು ಜನರು ಫೋನ್‌ಗೆ ಪ್ರತಿಕ್ರಿಯಿಸುತ್ತಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!