ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲು ದುರಂತ ಪ್ರಕರಣದ ಬಳಿಕ ಸ್ಥಗಿತಗೊಂಡಿದ್ದ ರೈಲು ಸಂಚಾರ ಮತ್ತೆ ಆರಂಭಗೊಳ್ಳುತ್ತಿದ್ದು,ರೈಲ್ವೆ ಇಲಾಖೆ ಒಂದೊಂದೇ ರೈಲು ಸಂಚಾರಕ್ಕೆ ಅನುಮತಿ ನಿಡುತ್ತಿದೆ.
ಸದ್ಯ ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ಬೋಗಿಗಳನ್ನ ಕ್ಲಿಯರ್ ಮಾಡಿ, ಹಳಿಗಳನ್ನು ಸಮರ್ಪಕವಾಗಿ ಜೋಡಣೆ ಮಾಡಿದ ಬೆನ್ನಲ್ಲೇ ಮತ್ತೆ ವಿವಿಧ ಭಾಗಗಳಿಂದ ಒಡಿಶಾ ಮಾರ್ಗವಾಗಿ ರೈಲ್ವೆ ಸಂಚಾರ ಆರಂಭಗೊಂಡಿದೆ. ಬೆಂಗಳೂರಿನ ಬೈಯಪ್ಪನಹಳ್ಳಿ SVMT ರೈಲ್ವೆ ನಿಲ್ದಾಣದಿಂದ 3 ರೈಲು ಹೊರಡುತ್ತಿದೆ. ಅಪಘಾತದ ಹಿನ್ನೆಲೆ ನಿನ್ನೆ ಬೆಂಗಳೂರಿನ 8 ರೈಲು ಸ್ಥಗಿತಗೊಳಿಸಲಾಗಿತ್ತು.
1. ರೈಲು ಸಂಖ್ಯೆ 22305, SMVT ರೈಲ್ವೆ ನಿಲ್ದಾಣದಿಂದ JSME ಗೆ(ಜಾರ್ಖಂಡ್) ಹೊರಟಿರುವ ರೈಲು. ಇದು ಬೆಳಿಗ್ಗೆ 10 ಗಂಟೆಗೆ ಇತ್ತು. ತಡವಾಗಿ ಇಂದು ಮಧ್ಯಾಹ್ನ 12.30 ಕ್ಕೆ ಬೈಯಪ್ಪನಹಳ್ಳಿಯಿಂದ ಹೊರಟಿದೆ.
2. ರೈಲು ಸಂಖ್ಯೆ 12864 ಬೈಯಪ್ಪನಹಳ್ಳಿ SMVT ಯಿಂದ ಹೌರಗೆ ಹೊರಟಿರುವ ರೈಲು. ಬೈಯಪ್ಪನಹಳ್ಳಿಯಿಂದ ಬೆಳಿಗ್ಗೆ 10.35 ಕ್ಕೆ ಇದ್ದ ರೈಲು ಮಧ್ಯಾಹ್ನ 1 ಗಂಟೆಗೆ ಹೊರಟಿದೆ.
3. ರೈಲು ಸಂಖ್ಯೆ 12246 ಬೈಯಪ್ಪನಹಳ್ಳಿ SMVT ಯಿಂದ ಹೌರ ಗೆ ಹೊರಟಿರುವ ರೈಲು ಇದು ಬೈಯಪ್ಪನಹಳ್ಳಿಯಿಂದ ಬೆಳಿಗ್ಗೆ 11.20 ಕ್ಕೆ ಹೊರಡಬೇಕಿತ್ತು. ಮಧ್ಯಾಹ್ನ 1.30 ಕ್ಕೆ ಹೊರಟಿದೆ.
1.30 ಕ್ಕೆ ಬೈಯಪ್ಪನಹಳ್ಳಿಯಿಂದ ಹೊರಡಬೇಕಿದ್ದ ಹೌರ ಬೆಂಗಳೂರು ಎಕ್ಸ್‌ಪ್ರೆಸ್ ಸ್ವಲ್ಪ ತಡವಾಗಿ ಹೊರಟಿದೆ. ಹೌರ ರೈಲಿನಲ್ಲಿ 1500 ಪ್ರಯಾಣಿಕರು ಇಂದು ಹೊರಟಿದ್ದಾರೆ. ಬೈಯಪ್ಪನಹಳ್ಳಿಯಿಂದ ಮಧ್ಯಾಹ್ನ 1.44 ಕ್ಕೆ ಹೊರಟಿದೆ. ನಾಳೆ ಸಂಜೆ 7.30 ರಿಂದ ರಾತ್ರಿ 8 ಗಂಟೆಗೆ ಹೌರಾ ತಲುಪಲಿದೆ.