ಒಡಿಶಾ ರೈಲು ದುರಂತ: 40 ಪ್ರಯಾಣಿಕರ ಸಾವಿಗೆ ವಿದ್ಯುತ್ ಶಾಕ್ ಕಾರಣ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಡಿಶಾದ ರೈಲು ದುರಂತದಲ್ಲಿ (In Odisha train tragedy) ಕೋರಮಂಡಲ್ ಎಕ್ಸ್ ಪ್ರೆಸ್ (Coromandel Express) ನಲ್ಲಿದ್ದ ಕನಿಷ್ಠ 40 ಪ್ರಯಾಣಿಕರು ವಿದ್ಯುತ್ ಆಘಾತ (Electric shock)ದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪೋಟಕ ಮಾಹಿತಿ ಬಯಲಾಗಿದೆ.

ಜಿ ಆರ್ ಪಿಯಲ್ಲಿ ದಾಖಲಾದ ಎಫ್‌ಐಆರ್ ನಲ್ಲಿ ಲೋ ಟೆನ್ಷನ್ ಲೈನ್ ಸಂಪರ್ಕಕ್ಕೆ ಬಂದ ನಂತರ ಡಿಕ್ಕಿ ಮತ್ತು ವಿದ್ಯುದಾಘಾತದಿಂದಾಗಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಎಂದು ತಿಳಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ರೈಲು ಅಪಘಾತದ ಸಮಯದಲ್ಲಿ ಬೋಗಿಗಳು ಉರುಳಿಬಿದ್ದಿದ್ದರಿಂದ ಓವರ್ ಹೆಡ್ ತಂತಿಗಳು ಮುರಿದು ಬಿದ್ದವು ಎಂದು ವರದಿಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!