ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರೇಮಿಗಳ ದಿನ ಆಚರಣೆಗೆ ಈಗಾಗಲೇ ವಿವಿಧ ಸಂಘಟನೆಯಿಂದ ವಿರೋಧ ವ್ಯಕ್ತವಾಗಿದ್ದು, ಪ್ರೇಮಿಗಳ ದಿನದಂದು ‘ಪೋಷಕರ ಆರಾಧನಾ ದಿನ’ ಆಚರಿಸಲು ಜನಜಾಗೃತಿ ಸಮಿತಿ ಸಂಘಟನೆ ಬೇಡಿಕೆ ಸಲ್ಲಿಸಿದೆ.
ಬೆಂಗಳೂರು ನಗರದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಯಾವುದೇ ಸಂದರ್ಭ ಆಚರಿಸಲು ಅವಕಾಶ ನೀಡಬಾರದು ಎಂದು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಪುಲ್ವಾಮಾ ದಾಳಿಯ ವಾರ್ಷಿಕೋತ್ಸವದಂದು ಪ್ರೇಮಿಗಳ ದಿನವನ್ನು ಆಚರಿಸುವುದು ಸರಿಯಲ್ಲ. ಆದ್ದರಿಂದ ಫೆಬ್ರವರಿ 14 ಅನ್ನು ಪೋಷಕರಿಗೆ ಗೌರವ ನೀಡುವ ದಿನವನ್ನಾಗಿ ಆಚರಿಸಬೇಕು’ ಎಂದು ಜನಜಾಗೃತಿ ಸಮಿತಿ ಮುಖಂಡರಿಂದ ಮನವಿ ಸಲ್ಲಿಸಲಾಗಿದೆ.