ಹೊಸದಿಗಂತ ಡಿಜಿಟಲ್ ಡೆಸ್ಕ್:
ನ. 8 ರಂದು ನಡೆಯುವ ಚಂದ್ರಗ್ರಹಣ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರುಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಆ ದಿನ ಮಧ್ಯಾಹ್ನ1.30 ರಿಂದ ರಾತ್ರಿ 7 ರವರೆಗೆ ಧರ್ಮಸ್ಥಳದಲ್ಲಿ ದೇವರ ದರುಶನಕ್ಕೆ ಅವಕಾಶವಿರುವುದಿಲ್ಲ ಮತ್ತು ಯಾವುದೇ ಸೇವೆಗಳಿಗೆ ಅವಕಾಶವಿರುವುದಿಲ್ಲ.
ಮಧ್ಯಾಹ್ನ 1.30ರವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದ್ದು, ಬಳಿಕ ರಾತ್ರಿ 7 ಗಂಟೆಯ ಬಳಿಕ ಭೋಜನ ವ್ಯವಸ್ಥೆ ಮುಂದುವರಿಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.