‘ವರ್ಷದ ಕ್ರಿಕೆಟರ್’ ಪ್ರಶಸ್ತಿಗೆ ಸ್ಮೃತಿ ಮಂದಾನ ನಾಮ ನಿರ್ದೇಶನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಮಹಿಳಾ ಕ್ರಿಕೆಟ್​ನ ಸೂಪರ್ ಸ್ಟಾರ್ ಎನಿಸಿರುವ ಸ್ಮೃತಿ ಮಂಧಾನ ಅವರ ಹೆಸರನ್ನು ಈ ವರ್ಷದ ಐಸಿಸಿ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಗುರುವಾರ ವರ್ಷದ ಮಹಿಳಾ ಟಿ20 ಕ್ರಿಕೆಟರ್ ಪ್ರಶಸ್ತಿಗೆ ಅವರ ಹೆಸರು ಶಾರ್ಟ್ ಲಿಸ್ಟ್ ಆಗಿತ್ತು. ಈಗ ಮತ್ತೊಂದು ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಗಮನಾರ್ಹ. ಜನವರಿ 23ರಂದು ಪ್ರಶಸ್ತಿ ಆಯ್ಕೆ ನಡೆಯಲಿದೆ.

ಸ್ಮೃತಿ ಮಂಧಾನ ಅವರು ಈ ವರ್ಷ ಈ ಮೂರು ಮಾದರಿಯ ಕ್ರಿಕೆಟ್​ನಲ್ಲಿ ವಿಜೃಂಬಿಸಿದ್ದು, ಈ ವರ್ಷ ಅವರು ಓಡಿಐ, ಟಿ20 ಮತ್ತು ಟೆಸ್ಟ್ ಸೇರಿ ಒಟ್ಟಾರೆ 22 ಪಂದ್ಯಗಳನ್ನ ಆಡಿ 38.86 ಸರಾಸರಿಯಲ್ಲಿ 855 ರನ್ ಭಾರಿಸಿದ್ದಾರೆ. ಒಂದು ಶತಕ ಹಾಗೂ ಐದು ಅರ್ಧಶತಕಗಳು ಬಂದಿವೆ. ಭಾರತ ಮಹಿಳಾ ತಂಡ ಈ ವರ್ಷ ಸಾಧಿಸಿದ ಬಹುತೇಕ ಗೆಲುವುಗಳಲ್ಲಿ ಸ್ಮೃತಿ ಮಂಧಾನ ಪಾತ್ರ ವಿಶೇಷವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!