ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳು ಸಮರ ಸಾರಿದ್ದು, ಇಂದು ಬೆಂಗಳೂರು ಬಂದ್‌ಗೆ ಕರೆಕೊಟ್ಟಿವೆ. ನಿನ್ನೆ ರಾತ್ರಿಯಿಂದಲೇ ಯಾವುದೇ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ಗಳು ಓಡಾಡುತ್ತಿಲ್ಲ. ಬೆಳ್ಳಂಬೆಳಗ್ಗೆ ಕಚೇರಿಗೆ ಹೋಗುವವರಿಗೂ ದೂರದೂರಿಗೆ ಪ್ರಯಾಣ ಮಾಡುವವರಿಗೂ ಬಂದ್‌ನ ಬಿಸಿ ತಟ್ಟಿದೆ. ಆಟೋ, ಟ್ಯಾಕ್ಸಿ ಅವಲಂಬಿಸುತ್ತದ್ದವರು ಇದೀಗ ಬೇರೆ ದಾರಿಯಿಲ್ಲದೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿಯತ್ತ ಮುಖ ಮಾಡಿದ್ದಾರೆ.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲಾ ಬಸ್‌ಗಳು ಜನರಿಂದ ಕಿಕ್ಕಿರಿದು ತುಂಬಿವೆ. ಇನ್ನೂ ಖಾಸಗಿ ಓಕ್ಕೂಟಕ್ಕೆ ಠಕ್ಕರ್ ಕೊಡಲು ಕಾಂಗ್ರೆಸ್ ಸರ್ಕಾರ 500ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 4 ಸಾವಿರ ಹೆಚ್ಚುವರಿ ಬಸ್ ಟ್ರಿಪ್ಗೆ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಎಲ್ಲಾ ಕಡೆಗೂ ಬಸ್‌ಗಳ ವ್ಯವಸ್ಥೆ ಇಂದು ಲಭ್ಯವಿದೆ.
ಏರ್‌ಪೋರ್ಟ್ ಟ್ಯಾಕ್ಸಿಗಳೂ ಬಂದ್‌ನಲ್ಲಿ ಭಾಗವಹಿಸುವುದರಿಂದ ವಿಮಾನ ನಿಲ್ದಾಣ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಮೆಟ್ರೋ ವಿಚಾರಕ್ಕೆ ಬಂದರೂ ಎಂದಿಗಿಂತ ಇಂದು ಹೆಚ್ಚುವರಿ ಟ್ರಿಪ್ ಓಡಿಸುವಂತೆ ಬಿಎಂಆರ್‌ಸಿಎಲ್‌ಗೆ ಸರ್ಕಾರ ಆದೇಶಿಸಿದೆ.