ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳು ಸಮರ ಸಾರಿದ್ದು, ಇಂದು (ಸಪ್ಟೆಂಬರ್ 11) ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿವೆ. ಭಾನುವಾರ ತಡರಾತ್ರಿಯಿಂದಲೇ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ಗಳು, ಓಲಾ, ಊಬರ್ ಸೇವೆ ಬಂದ್ ಆಗಿದ್ದು, ಸಿಲಿಕಾನ್ ಸಿಟಿ ರಸ್ತೆಗಳೆಲ್ಲಾ ಅಟೋ, ಟ್ಯಾಕ್ಸಿಯ ಶಬ್ದವಿಲ್ಲದೆ ಬಿಕೋ ಎನ್ನುತ್ತಿವೆ.
ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿ ಜನರಿಗೆ ಬಂದ್‌ನ ಬಿಸಿ ತಟ್ಟಿದೆ. ಸರ್ಕಾರಿ ಸಾರಿಗೆ ಹೊರತುಪಡಿಸಿ ಇನ್ಯಾವುದೇ ವಾಹನ ರಸ್ತೆಯಲ್ಲಿ ಇಂದು ಓಡಾಡುವುದಿಲ್ಲ. 32ಕ್ಕೂ ಹೆಚ್ಚು ಸಂಘಟನೆಗಳ 7 ಲಕ್ಷಕ್ಕೂ ಹೆಚ್ಚು ವಾಹನಗಳಿಂದ ಬಂದ್ ನಡೆಯಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಶಕ್ತಿ ಯೋಜನೆ ವಿರುದ್ಧ ಇದುವರೆಗೂ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದ, ಖಾಸಗಿ ವಾಹನ ಸವಾರರು ಇದೀಗ ತಮ್ಮ ಬೇಡಿಕೆ ಈಡೇರಿಕೆಗಾಗಿ ಬೀದಿಗಿಳಿದಿದೆ.
ಬಂದ್‌ಗೆ ಯಾರೆಲ್ಲಾ ಬೆಂಬಲ ಇದೆ
ಆಟೋ ರಿಕ್ಷಾಗಳು,
ಓಲಾ, ಊಬರ್ ಆಟೋ/ ಟ್ಯಾಕ್ಸಿ
ಶಾಲಾ ಆಟೋಗಳು
ಕಂಪನಿಗಳ ಕ್ಯಾಬ್
ಏರ್‌ಪೋರ್ಟ್ ಟ್ಯಾಕ್ಸಿ
ಸ್ಕೂಲ್ ವ್ಯಾನ್‌ಗಳು
ಖಾಸಗಿ ಬಸ್‌ಗಳು ಬೆಂಬಲ ಸೂಚಿಸಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇವೆ ಎಂದಿನಂತೆ ಇರಲಿದೆ.