September 14, 2026
Monday, September 14, 2026
spot_img

ತಮಿಳುನಾಡು ಜನತೆಗೆ ಆಫರ್‌ ಮೇಲೆ ಆಫರ್‌: ವಿಜಯ್‌ ಸರ್ಕಾರದಿಂದ ವರ್ಷಕ್ಕೆ ಮೂರು ಸಿಲಿಂಡರ್‌ ಉಚಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡು ಜನತೆಗೆ ಸಿಎಂ ಜೋಸೆಫ್‌ ವಿಜಯ್‌ ಸರ್ಕಾರದಿಂದ ಆಫರ್‌ ಮೇಲೆ ಆಫರ್‌ ಸಿಗುತ್ತಲೇ ಇದೆ. ಜನತೆಗೆ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ.

ಅನ್ನಪೂರ್ಣಿ ಸೂಪರ್‌ ಸಿಕ್ಸ್‌ ಹೆಸರಿನಲ್ಲಿ ತಮಿಳುನಾಡು ಸರ್ಕಾರ ಪ್ರತೀ ಮನೆಗೆ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿದೆ. ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಮಾತ್ರ ಫ್ರೀ ಸಿಲಿಂಡರ್‌ ಸಿಗಲಿದೆ. ಲೆಕ್ಕಾಚಾರದ ಪ್ರಚಾರ ಒಟ್ಟಾರೆ ಒಂದೂವರೆ ಕೋಟಿ ಕುಟುಂಬಗಳಿಗೆ ಫ್ರೀ ಸಿಲಿಂಡರ್‌ ಸಿಗಲಿದೆ. ಈ ಯೋಜನೆಗೆ ವಿಜಯ್‌ ಸರ್ಕಾರ 4000 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.

ಕುಟುಂಬದ ಯಜಮಾನಿಯ ಖಾತೆಗೆ ಹಣ

ಈ ಬಗ್ಗೆ ಸಿಎಂ ವಿಜಯ್‌ ಮಾತನಾಡಿದ್ದು, ಇದು ಬಡವರಿಗಾಗಿ ಮಾಡಿರುವ ಯೋಜನೆ. ಆರ್ಥಿಕವಾಗಿ ದುರ್ಬಲ ವರ್ಗಗಳು, ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳು ಮತ್ತು ಅಂಗವಿಕಲ ವ್ಯಕ್ತಿಗಳ ಕುಟುಂಬಗಳನ್ನು ಒಳಗೊಳ್ಳುತ್ತದೆ. ಅಡುಗೆ ಅನಿಲ ಸಿಲಿಂಡರ್‌ನ ವೆಚ್ಚವನ್ನು ಮರುಪಾವತಿಸಲಾಗುತ್ತದೆ. ಕಂಪನಿಗಳಿಂದ ಅಧಿಕೃತ ಬಿಲ್ಲಿಂಗ್ ಆಧಾರದ ಮೇಲೆ ಬುಕಿಂಗ್ ಮತ್ತು ವಿತರಣೆಯ ನಂತರ ಕುಟುಂಬದ ಯಜಮಾನಿ ಬ್ಯಾಂಕ್ ಖಾತೆಗೆ ನೇರವಾಗಿ ಯೋಜನೆಯ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !