ತುಂಬಿದ ಭದ್ರೆಯ ಮಡಿಲಿಗೆ ಬಾಗಿನ ಅರ್ಪಣೆ.. ಶಾಸಕ, ಅಧಿಕಾರಿಗಳ ಮಧ್ಯೆ ಜಟಾಪಟಿ

ಹೊಸದಿಗಂತ ವಿಜಯನಗರ:

ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಬಾಗೀನ ಅರ್ಪಣೆ ಕಾರ್ಯಕ್ರಮಕ್ಕೆ ಪ್ರವೇಶ ಕಲ್ಪಿಸುವ ವಿಚಾರವಾಗಿ ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ಅಧಿಕಾರಿಗಳ ಮಧ್ಯೆ ವಾಗ್ವಾದ ನಡಯಿತು.

ಹೊಸಪೇಟೆ ಸಮೀಪದ ಟಿಬಿ ಡ್ಯಾಂ ಗೆ ಬಾಗೀನ ಅರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದು, 10 ಕ್ಕೂ ಹೆಚ್ಚು ವಾಹನಗಳಲ್ಲಿ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ ಶಾಸಕ ಎಚ್.ಆರ್.ಗವಿಯಪ್ಪ ಅವರನ್ನು ಪೊಲೀಸರು ಮೇನ್ ಗೇಟ್ ಬಳಿ ತಡೆದರು.

ನಿಮ್ಮ ವಾಹನ ಸೇರಿ ಮೂರು ವಾಹನಗಳನ್ನು ಮಾತ್ರ ಬಿಡುತ್ತೇವೆ. ಭದ್ರತೆಯಿಂದ ದೃಷ್ಠಿಯಿಂದ ಬೆಂಬಲಿಗರ ವಾಹನ ಬಿಡಲು ಸಾಧ್ಯವಿಲ್ಲಾ ಎಂಬ ಪೋಲೀಸರ ಹೇಳಿಕೆಗೆ ಶಾಸಕರು ಗರಂ ಆದರು. ಬಿಟ್ರೆ ಎಲ್ಲರನ್ನು ಬಿಡಿ. ಇಲ್ಲ ನಾನು ವಾಪಾಸ್ ಹೋಗ್ತೆನೆ ಎಂದು ಶಾಸಕರು ವಾಪಾಸ್ಸಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!