ಕಾರ್ಯಕರ್ತರಿಗಾಗಿ ಕಾರ್ಯಾಲಯ: ರವಿಕುಮಾರ್

ಹೊಸದಿಗಂತ ವರದಿ ಕೊಪ್ಪಳ:

ರಾಜ್ಯ ಹಾಗೂ ದೇಶದಲ್ಲಿ ಕಾರ್ಯಾಲಯ ಕಟ್ಟುವ ಪಕ್ಷ ವಿದೆ. ಈ ದೇಶಕ್ಕೆ ಭದ್ರವಾದ ಬುನಾದಿ, ಎಲ್ಲರ ಕಲ್ಯಾಣಕ್ಕಾಗಿ, ಪಾರ್ಟಿಗೆ ಭದ್ರ ಬುನಾದಿ ಹಾಕಲು ಜನ ಸಂಘ ಆರಂಭವಾಯಿತು. ಆಗ ಇಬ್ಬರೇ ಸಂಸದರು ಇದ್ದರು. ಈಗ 300 ಕ್ಕೂ ಅಧಿಕ ಸಂಸದರು ಇದ್ದಾರೆ.
ಕಾರ್ಯಕರ್ತರಿಗಾಗಿ ಕಾರ್ಯಾಲಯ ಕಟ್ಟಬೇಕು ಎಂದು ಪಕ್ಷ ತೀರ್ಮಾನಿಸಿ ಕಾರ್ಯಾಲಯ ಕಟ್ಟಲಾಗಿದೆ. ರಾಜ್ಯದಲ್ಲಿಯೇ ಶಿವಮೊಗ್ಗ ದಲ್ಲಿ ಮೊದಲ ಕಾರ್ಯಾಲಯ ಕಟ್ಟಲಾಯಿತು ಎಂದು ಎಂಎಲ್‌ಸಿ ಎನ್.ರವಿಕುಮಾರ್ ಎಂದರು.

ಕೊಪ್ಪಳ ದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರಿ, 600 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಕಾರ್ಯಾಲಯ ಕಟ್ಟಲು ಅಮಿತ್ ಶಾ ನಿರ್ಧರಿಸಿ ಈವರಗೆ 300 ಕ್ಕೂ ಅಧಿಕ ಕಾರ್ಯಾಲಯ ನಿರ್ಮಾಣ ಮಾಡಲಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸಿದ ಕಾಂಗ್ರೆಸ್ ಎಷ್ಟು ಕಾರ್ಯಾಲಯ ಕಟ್ಟಿದ್ದಾರೆ ? ದೆಹಲಿಯಲ್ಲಿ ಬಿಜೆಪಿ ಮೂರು ವರ್ಷದಲ್ಲಿ ಕಾರ್ಯಾಲಯ ಕಟ್ಟಲಾಗಿದೆ. ಆದರೆ, ಕಾಂಗ್ರೆಸ್ 20 ವರ್ಷವಾದರೂ, ಕಾರ್ಯಾಲಯ ಕೊಟ್ಟಿಲ್ಲ. ನಮ್ಮ ಪಕ್ಷ ಲಾಡ್ಜ್ ನಲ್ಲಿ ಇರುವ ಪಾರ್ಟಿ ಅಲ್ಲ, ಕಾರ್ಯಾಲಯ ದಲ್ಲಿ ಇರುವ ಪಾರ್ಟಿ ಬಿಜೆಪಿಯಾಗಿದೆ ಎಂದರು.

ಕಾಂಗ್ರೆಸ್ ಗೆದ್ರೆ ಕರ್ನಾಟಕ ಮತ್ತು ಭಾರತಕ್ಕೆ ಲಾಭವಿಲ್ಲ. ಕೇವಲ ಕೆಲವೇ ಜನರಿಗೆ ಲಾಭವಿದೆ. ಡಿಕೆಶಿ, ಸಿದ್ದು, ರಾಹುಲ್ ಗಾಂಧಿ ಗೆ ಮಾತ್ರ ಲಾಭವಾಗಲಿದೆ. ಬಿಜೆಪಿ ಗೆದ್ದರೆ ರೈತರು, ಸಾರ್ವಜನಿಕ ರಿಗೆ ಲಾಭವಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!