ಅಧಿಕಾರಿಗಳ ಭರ್ಜರಿ ಬೇಟೆ: 3.55 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ

ಹೊಸದಿಗಂತ ಜೋಯಿಡಾ:

ಗೋವಾ ರಾಜ್ಯದ ಫೋಂಡಾದಿಂದ ಮುಂಬೈಗೆ ಹೋಗಲು ಬರುತ್ತಿದ್ದ ಟಾಟಾ ಕಂಪನಿಯ ಗೂಡ್ಸ್ ಕ್ಯಾರಿಯರ್ ಕಂಟೇನರ್ ಲಾರಿಯಲ್ಲಿ3,66 ಲಕ್ಷ ರೂ. ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಗೂಡ್ಸ್ ಕಂಟೇನರ್ ಎಂ.ಹೆಚ್.43 ಸಿಕೆ -5870 ಇದರ ಹಿಂಭಾಗದಲ್ಲಿ ಪೇಂಟ್ ಇರುವ 81ಬಾಕ್ಸ್ ಮತ್ತು 374 ಡ್ರಮ್ ಗಳು ತುಂಬಿಕೊಂಡಿದ್ದು, ವಾಹನದ ಮುಂಭಾಗದ ಕ್ಯಾಬಿನ್ ನ ಮೇಲ್ಭಾಗದಲ್ಲಿ ಕೃತ್ರಿಮವಾಗಿ ಕಂಪಾರ್ಟ್ಮೆಂಟನ್ನು ನಿರ್ಮಿಸಿಕೊಂಡು ಅವುಗಳಲ್ಲಿ ರಾಯಲ್ ಗ್ರೀನ್ ವಿಸ್ಕಿಯ 750 ಎಂ.ಎಲ್.ನ 20 ಪೆಟ್ಟಿಗೆ ಮತ್ತು ಓಕ್ಸ್ಮಿತ್ ಗೋಲ್ಡ್ ವಿಸ್ಕಿಯ 750 ml ನ 10 ಪೆಟ್ಟಿಗೆ ಮದ್ಯವನ್ನು ಅನಧಿಕೃತವಾಗಿ ಮುಂಬೈ ವ್ಯಾಪ್ತಿಯ ಭೀವಂದಡಿಗೆ ಸಾಗಿಸುತ್ತಿದ್ದು ,ವಾಹನ ಮತ್ತು ಮದ್ಯದ ಪೆಟ್ಟಿಗೆಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ.

ಆರೋಪಿಯಾದ ಭವನ ಬಿನ್ ಮುರಾಜಿ ಗಾಂಧಿ ವಾಸ :’ಎಸ್ .ಎಸ್.-3 ತ- 896 ಸೆಕೆಂಡ್ ಫ್ಲೋರ್, ಕೊಪರ್ ಖೈರಾನ, ನವೀ- ಮುಂಬೈ, ಸೆಕ್ಟರ್-7 ಠಾಣೆ ,ಮಹಾರಾಷ್ಟ್ರ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಜಪ್ತುಪಡಿಸಿದ ವಾಹನದ ಅಂದಾಜಿನ ಬೆಲೆ ರೂ. 22 ಲಕ್ಷ ಗಳಾಗಿದ್ದು, ಬರ್ಜರ್ ಪೇಂಟಿನ ಬೆಲೆ ರೂ.3,75,000ಗಳಾಗಿದ್ದು, ಜಪ್ತುಪಡಿಸಿದ ಮಧ್ಯದ ಅಂದಾಜಿನ ಬೆಲೆ ರೂ. 3,66,000 ಗಳಾಗಿರುತ್ತವೆ.

ಅಬಕಾರಿ ಜಂಟಿ- ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಮಂಗಳೂರು ರವರ ನಿರ್ದೇಶನ ಹಾಗೂ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ಮಾರ್ಗದರ್ಶನದ ಮೇರೆಗೆ, ಮಹೇಂದ್ರ ಎಸ್. ನಾಯ್ಕ ಅಬಕಾರಿ ನಿರೀಕ್ಷಕರು, ಟಿ.ಬಿ. ಮಲ್ಲಣ್ಣನವರ್ ಅಬಕಾರಿ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಶ್ರೀಕಾಂತ್ ಜಾಧವ್ ದೀಪಕ್ ಬಾರಾಮತಿ , ಮಹಾಂತೇಶ ಹೊನ್ನೂರ್ ಶ್ರೀಶೈಲ್ ಹಡಪದ್ ಮತ್ತು ಪ್ರವೀಣ್ ಹೊಸಕೋಟಿ ಇವರುಗಳು ಈ ಅಕ್ರಮ ಪತ್ತೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!