ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಳಿಪಟ-2 ಸಿನಿಮಾ ತೆರೆ ಬರಲು ಸಾಕಲು ಸಿದ್ಧತೆ ನಡೆಸುತ್ತಿದ್ದು, ಇತ್ತ ಬಿಡುಗಡೆಗೊಂಡ ಹಾಡುಗಳು ಅಭಿಮಾನಿಗಳಿಗೆ ಹತ್ತಿರವಾಗುತ್ತಿದೆ.
ಈಗಾಗಲೇ ಬಿಡುಗಡೆ ಆಗಿರುವ ರೊಮ್ಯಾಂಟಿಕ್ ‘ನಾನಾಡದ ಮಾತೆಲ್ಲವ’ ಹಾಡಿಗೆ ಯೂಟ್ಯೂಬ್ನಲ್ಲಿ 20 ಲಕ್ಷ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೀಗ ಗಾಳಿಪಟ 2 ಚಿತ್ರದ ಮತ್ತೊಂದು ಎಣ್ಣೆ ಹಾಡನ್ನ ಬಿಡುಗಡೆ ಮಾಡಲಾಗುತ್ತಿದ್ದು, ಯೋಗರಾಜ್ ಭಟ್ ಸಾಹಿತ್ಯದಲ್ಲಿ ಈ ಹಾಡು ಹುಟ್ಟಿಕೊಂಡಿದೆ.
‘ಖಾಲಿ ಕ್ವಾಟರ್ ಬಾಟ್ಲಿ ಹಂಗೆ ಲೈಫು’ ಸಾಂಗಿನ ಕಾಂಬಿನೇಷನ್ ಇಲ್ಲಿ ಮತ್ತೆ ಒಂದಾಗಿದೆ. ಯೋಗರಾಜ್ ಭಟ್ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ.
ಜುಲೈ 14 ರಂದು ಆನಂದ್ ಆಡಿಯೋ ಮೂಲಕ ಗಾಳಿಪಟ-2 ಚಿತ್ರದ ಎಣ್ಣೆ ಹಾಡು ಬಿಡುಗಡೆಯಾಗಲಿದೆ. ಈ ಹಾಡಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಫಾರಿನ್ ಲೋಕೇಶನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಜೋಡಿಗಳಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಅಭಿನಯಿಸಿದ್ದಾರೆ. ಇದರ ಜೊತೆಗೆ ಅನಂತ್ ನಾಗ್, ರಂಗಾಯಣ ರಘು ಹೀಗೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ.
ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಗಾಳಿಪಟ-2 ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ.