ಒಮಾನ್‌ನಲ್ಲಿ ತೈಲ ಟ್ಯಾಂಕರ್ ಮುಳುಗಡೆ: 13 ಭಾರತೀಯರು ಸೇರಿದಂತೆ ಸಿಬ್ಬಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಮಾನ್‌ನಲ್ಲಿ ಮುಳುಗಿದ ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್‌ನ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ಕಡಲ ಭದ್ರತಾ ಕೇಂದ್ರ ಮಂಗಳವಾರ ತಿಳಿಸಿದೆ.

“ಪ್ರೆಸ್ಟೀಜ್ ಫಾಲ್ಕನ್” ನ ಸಿಬ್ಬಂದಿ 13 ಭಾರತೀಯ ಪ್ರಜೆಗಳು ಮತ್ತು ಮೂವರು ಶ್ರೀಲಂಕಾದವರನ್ನು ಒಳಗೊಂಡಿತ್ತು ಎಂದು ಒಮಾನಿ ಕೇಂದ್ರವು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದೆ.

ಹಡಗು ಸ್ಥಿರಗೊಂಡಿದೆಯೇ ಅಥವಾ ತೈಲ ಅಥವಾ ತೈಲ ಉತ್ಪನ್ನಗಳು ಸಮುದ್ರಕ್ಕೆ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಲ್ಲ.

LSEG ಯ ಶಿಪ್ಪಿಂಗ್ ಡೇಟಾವು ಟ್ಯಾಂಕರ್ ಯೆಮೆನ್ ಬಂದರಿನ ಏಡೆನ್‌ಗೆ ಹೋಗುತ್ತಿದ್ದ ವೇಳೆ ಒಮಾನ್‌ನ ಪ್ರಮುಖ ಕೈಗಾರಿಕಾ ಬಂದರು ಡುಕ್ಮ್‌ನಿಂದ ಮಗುಚಿ ಬಿದ್ದಿದೆ ಎಂದು ಹೇಳಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!