ವಿಮಾನ ನಿಲ್ದಾಣದಲ್ಲಿ ವೀಲ್ ಚೇರ್ ಸಿಗದೆ ಮೃತಪಟ್ಟ ವೃದ್ಧ: ಏರ್ ಇಂಡಿಯಾಗೆ 30 ಲಕ್ಷ ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ವೀಲ್ ಚೇರ್ ಸಿಗದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಪ್ರಯಾಣಿಕರೊಬ್ಬರು ಕಾಲ್ನಡಿಗೆಯಲ್ಲಿ ನಡೆಯಬೇಕಾಗಿ ಬಂದಿದ್ದು, ಬಳಿಕ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಈ ಘಟನೆಗಾಗಿ ಡಿಜಿಸಿಎ ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಪ್ರಾಣ ಕಳೆದುಕೊಂಡ ವ್ಯಕ್ತಿಗೆ 80 ವರ್ಷ ವಯಸ್ಸಾಗಿದ್ದು, ಇವರು ಪತ್ನಿಯೊಂದಿಗೆ ನ್ಯೂಯಾರ್ಕ್‌ನಿಂದ ಮುಂಬೈಗೆ ಬಂದಿದ್ದರು.

ವರದಿಗಳ ಪ್ರಕಾರ, 80 ವರ್ಷದ ವ್ಯಕ್ತಿಯೊಬ್ಬರು ನ್ಯೂಯಾರ್ಕ್‌ನಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ತನಗೆ ಮತ್ತು ತನ್ನ ಹೆಂಡತಿಗೆ ಟಿಕೆಟ್ ಕಾಯ್ದಿರಿಸಿದ್ದರು. ಟಿಕೆಟ್ ಕಾಯ್ದಿರಿಸುವಾಗ ವೀಲ್ ಚೇರ್ ಸೇವೆಯನ್ನೂ ಕೇಳಿದ್ದರು. ಆದರೆ, ಮುಂಬೈ ವಿಮಾನ ನಿಲ್ದಾಣವನ್ನು ತಲುಪಿದಾಗ, ಅವರು ಕೇವಲ ಒಂದು ಗಾಲಿಕುರ್ಚಿಯನ್ನು ಪಡೆದರು, ಅದನ್ನು ಅವರು ತನ್ನ ಹೆಂಡತಿಗೆ ಕೊಟ್ಟರು. ವಯಸ್ಸಾದ ವ್ಯಕ್ತಿ ಸ್ವತಃ ಸುಮಾರು ಒಂದೂವರೆ ಕಿಲೋಮೀಟರ್ ನಡೆದು ಇಮಿಗ್ರೇಷನ್ ಕೌಂಟರ್‌ಗೆ ಬಂದಿದ್ದು, ಅಲ್ಲಿಗೆ ತಲುಪಿದ ತಕ್ಷಣ ಅವರು ಇದ್ದಕ್ಕಿದ್ದಂತೆ ಕುಸಿದು ನಿಧನರಾದರು.

ಈ ಘಟನೆಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಗಾಲಿಕುರ್ಚಿಗಳ ಕೊರತೆಯಿಂದಾಗಿ ಒಂದು ಗಾಲಿಕುರ್ಚಿಯನ್ನು ಮಾತ್ರ ಲಭ್ಯವಾಗುವಂತೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದರು. ವೃದ್ಧ ಪ್ರಜ್ಞೆ ತಪ್ಪಿದ ನಂತರ, ಅವರನ್ನು ಮೊದಲು ವಿಮಾನ ನಿಲ್ದಾಣದ ವೈದ್ಯಕೀಯ ಸೌಲಭ್ಯದ ಬಳಿ ಕರೆದೊಯ್ಯಲಾಯಿತು. ಅಲ್ಲಿಂದ ನಾನಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೃದ್ಧರು ಭಾರತೀಯ ಮೂಲದವರಾಗಿದ್ದು, ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!