ಮತ್ತೆ ನೆನಪಾಯಿತು ಹಳೆ ನೆನಪುಗಳು: ಅಪ್ಪು ಸಿನಿಮಾ ನೋಡಿ ರಮ್ಯಾ ರಿಯಾಕ್ಷನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ನಟ ಪುನೀತ್ ರಾಜ್‌ಕುಮಾರ್ ಅಭಿನಯದ ‘ಅಪ್ಪು’ ಸಿನಿಮಾ ಮಾ.14ರಂದು ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ವೀರೇಶ್ ಥಿಯೇಟರ್‌ಗೆ ಆಗಮಿಸಿ ವಿನಯ್ ರಾಜ್‌ಕುಮಾರ್, ಶರ್ಮಿಳಾ ಮಾಂಡ್ರೆ ಜೊತೆ ರಮ್ಯಾ ‘ಅಪ್ಪು’ ಚಿತ್ರ ವೀಕ್ಷಿಸಿದ್ದಾರೆ.

ಬಳಿಕ ಮಾತನಾಡಿದ ರಮ್ಯಾ , ‘ಅಪ್ಪು’ ಸಿನಿಮಾ ರಿಲೀಸ್ ಆದಾಗ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದೆ, ಹಾಗಾಗಿ ಹಳೆಯ ನೆನಪುಗಳೆಲ್ಲಾ ಬರುತ್ತಿದೆ. ಆಗ ನಾನು ‘ಅಪ್ಪು’ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದು, ನೆನಪಾಯ್ತು. ಈಗ ಮತ್ತೆ ಅದೇ ಸಿನಿಮಾ ನೋಡಿದಾಗ ಅಪ್ಪು ಇಲ್ಲ ಅಂತ ನಂಬೋಕೆ ಆಗಲ್ಲ. ಆದರೆ ಸಿನಿಮಾ ಮೂಲಕ ಅಪ್ಪು ಜೀವಂತವಾಗಿದ್ದಾರೆ ಎಂದಿದ್ದಾರೆ.

‘ಅಪ್ಪು’ ಸಿನಿಮಾ ಬಂದು 23 ವರ್ಷಗಳಾಯ್ತು. ಈಗ ಮತ್ತೆ ಈ ಚಿತ್ರವನ್ನು ನೋಡೋಕೆ ಬಂದಿದ್ದೀನಿ, ನಂಬೋಕೆ ಆಗ್ತಿಲ್ಲ. ಇದೇ ಜೀವನ. ಮೊದಲ ಬಾರಿ ‘ಅಪ್ಪು’ ಸಿನಿಮಾ ನೋಡಿದಾಗ ನಾನು ಕೂಡ ಅಭಿಮಾನಿಯಾಗಿ ಹೋಗಿ ಚಿತ್ರ ನೋಡಿದ್ದೆ, ಆ ನಂತರ ಪುನೀತ್ ಜೊತೆ ನಾನು ಕೂಡ ಸಿನಿಮಾ ಮಾಡಿದ್ದೀನಿ. ಜನ ನನ್ನನ್ನು ಗುರುತಿಸುತ್ತಾರೆ. ಈಗ ಚಿತ್ರ ನೋಡಿದಾಗ ಎಲ್ಲವೂ ನೆನಪಾಗುತ್ತದೆ ಎಂದಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here