ಧಾರಾಕಾರ ಮಳೆಗೆ ಹಳೇ ಮೈಸೂರು-ಬೆಂಗಳೂರು ಹೆದ್ದಾರಿ ಜಲಾವೃತ

ಹೊಸದಿಗಂತ ವರದಿ,ಶ್ರೀರಂಗಪ್ಟಟಣ :

ಸೋಮವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಹಳೇ ಮೈಸೂರು-ಬೆಂಗಳೂರು ಹೆದ್ದಾರಿ ಜಲಾವೃತಗೊಂಡು ವಾಹನ ಸವಾರರು ಪರದಾಟ ನಡೆಸಿದ ಘಟನೆ ನಡೆದಿದೆ.

ಪಟ್ಟಣದ ಅಗ್ನಿಶಾಮಕ ಠಾಣಾ ಬಳಿಯ ಹೆದ್ದಾರಿ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡು ಮೈಸೂರಿನಿಂದ ಶ್ರೀರಂಗಪಟ್ಟಣ ಕಡೆಗೆ ತೆರಳುತ್ತಿದ್ದ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

ಸೋಮವಾರ ರಾತ್ರಿ ಆರಂಭವಾದ ಮಳೆ ಮುಂಜಾನೆ ವರೆವಿಗೂ ಧಾರಾಕಾರವಾಗಿ ಸುರಿದ ಪರಿಣಾಮ ರಸ್ತೆ ಮದ್ಯೆ ಸುಮಾರು 3 ಅಡಿ ಯಷ್ಟು ನೀರು ನಿಂತಿದೆ. ಹೆದ್ದಾರಿ ಪಕ್ಕದಲ್ಲಿನ ಖಾಸಗಿ ಲಾಡ್ಜ್‌, ಅಚಿಡಗಿ ಮಳಿಗೆಗಳಿಗೂ ಸಹ ನೀರು ನುಗ್ಗಿದ್ದು, ನೀರು ಹೊರ ಹಾಕಲು ಸಿಬ್ಬಂದಿಗಳು ಹೈರಾಣಾಗಿದ್ದಾರೆ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹರಿದು ಹೋಗಲು ಸಾಧ್ಯವಾಗದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷದಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾವಾಗಿದೆ. ಇನ್ನುಮುಂದಾದರೂ ಪುರಸಭೇ ಅಥವಾ ಸಂಬಂಧಪಟ್ಟವರು ಶೀಗ್ರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹೆದ್ದಾರಿಯಲ್ಲಿ ನಿಂತ ಮಳೆನೀರಿನಿಂದಾಗಿ ವಾಹನ ಸವಾರರು ಮುಂದೆ ಸಾಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ಇನ್ನು ಹಲವು ವಾಹನಗಳು ನೀರಿನ ಮದ್ಯೆ ಸಿಲುಕಿ ಮುಂದೆ ಸಾಗಲು ಸಾಧ್ಯವಾಗದೆ ಪರದಾಟ ನಡೆಸುವಂತಾಯಿತು. ಇದರಿಂದ ಹೆದ್ದಾರಿಯಲ್ಲಿ ತೆರಳಲಾಗದೆ ಚೆಕ್ ಪೋಸ್ಟ್‌ ಪಟ್ಟಣ ಒಳ ಪ್ರವೇಶಿಸಿದ ಕೆಲ ವಾಹನ ಸವಾರರು ಜಯಲಕ್ಷ್ಮಿ ಕಲ್ಯಾಣ ಮಂಟಪ, ಅಂಬೇಡ್ಕರ್ ವೃತ್ತ, ಬಾತುಕೋಳಿ ಸರ್ಕಲ್ ಮೂಲಕ ಬೆಂ-ಮೈ ಹೆದ್ದಾರಿ ಪ್ರವೇಶಿಸಿ ಸಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!