ವೈರಲ್‌ ಆಗ್ತಿದೆ ಹಳೇ ನೋಟು ಬದಲಾವಣೆ ಸುದ್ದಿ- ಫೇಕ್ ನ್ಯೂಸ್‌ ಎಂದ ಪಿಐಬಿ ಫ್ಯಾಕ್ಟ್‌ ಚೆಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೋಟ್‌ ಬ್ಯಾನ್‌ ಸಂದರ್ಭದಲ್ಲಿ ನೀಷೇಧಗೊಂಡಿದ್ದ 500 ಹಾಗು 1,000 ಮುಖಬೆಲೆಯ ನೋಟುಗಳನ್ನು ವಿದೇಶಿಗರು ಈಗಲೂ ಬದಲಾಯಿಸಿಕೊಳ್ಳಬಹುದು ಎಂಬ ಸುದ್ದಿಗಳು ಈಗ ಎಲ್ಲೆಡೆ ಹರಿದಾಡುತ್ತಿದ್ದು ಇದು ಸುಳ್ಳು ಸುದ್ದಿ ಎಂದು ಪಿಐಬಿ ಫ್ಯಾಕ್ಟ್‌ ಚೆಕ್‌ ಹೇಳಿದೆ.

2017 ರಲ್ಲಿ, ಕೇಂದ್ರ ಸರ್ಕಾರವು 500 ಮತ್ತು 1000 ರೂಪಾಯಿಗಳ ನೋಟುಗಳನ್ನು ರದ್ದುಗೊಳಿಸಿತು ಮತ್ತು 500 ಮತ್ತು 2000 ರೂ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿತು. ನೋಟು ಅಮಾನ್ಯೀಕರಣದ ಏಳು ವರ್ಷಗಳ ನಂತರ, ವಿದೇಶಿ ನಾಗರಿಕರು ಇನ್ನೂ ಹಳೆಯ ನೋಟುಗಳನ್ನು ಬದಲಾಯಿಸಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಕೆಲ ಚಿತ್ರಗಳಲ್ಲಿ ವಿದೇಶಿ ವಿನಿಮಯ ಇಲಾಖೆಯ ಅಧ್ಯಕ್ಷ ಮತ್ತು ಮುಖ್ಯ ಜನರಲ್ ಮ್ಯಾನೇಜರ್ ಎಕೆ ಪಾಂಡೆ ಅವರ ಸಹಿಯನ್ನು ಲಗತ್ತಿಸಿ ಸುತ್ತೋಲೆ ಚಿತ್ರವನ್ನು ಹರಿಬಿಡಲಾಗಿದ್ದು ಇದು ಸತ್ಯ ಸುದ್ದಿ ಎಂಬಂತೆ ಬಿಂಬಿಸಲಾಗುತ್ತಿದೆ.

ಈ ಕುರಿತು ಪ್ರೆಸ್‌ ಇನ್ಫಾರ್ಮೇಷನ್‌ ಬ್ಯೂರೋ (PIB) ಫ್ಯಾಕ್ಟ್‌ ಚೆಕ್‌ ನಡೆಸಿದ್ದು ಸತ್ಯಾಂಶವನ್ನು ಬಹಿರಂಗಪಡಿಸಿದೆ. “ಈ ಆದೇಶವು ನಕಲಿ” ಎಂದು ಪಿಐಬಿ ಸ್ಪಷ್ಟವಾಗಿ ಹೇಳಿದೆ. ವಿದೇಶಿ ಪ್ರಜೆಗಳಿಗೆ ಭಾರತೀಯ ಅಮಾನ್ಯಗೊಂಡ ಕರೆನ್ಸಿ ನೋಟುಗಳ ವಿನಿಮಯ ಸೌಲಭ್ಯವು 2017 ರಲ್ಲಿ ಕೊನೆಗೊಂಡಿದ್ದು ಆ ಸೌಲಭ್ಯ ಈಗ ಲಭ್ಯವಿಲ್ಲ ಎಂದು ಪಿಐಬಿ ಟ್ವೀಟ್‌ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!