ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕನೊಬ್ಬ ಮೊಬೈಲ್‌ನಲ್ಲಿ ಪಾರ್ನ್ ವಿಡಿಯೋಗಳನ್ನು ನೋಡುತ್ತಾ ತನ್ನ ತಂಗಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ.
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತನ್ನ ತಂಗಿಗೆ ಇನ್ಯಾರಿಂದಲೂ ಲೈಂಗಿಕ ಕಿರುಕುಳ ಆಗಂದತೆ ಕಾಯಬೇಕಿದ್ದ ಅಣ್ಣನೇ ಪಾರ್ನ್ ನೋಡಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ತಂಗಿಯನ್ನು ಬಳಸಿಕೊಂಡಿದ್ದಾನೆ.
19 ವರ್ಷದ ಸಂಜು ಕೊಲೆಗಾರ. ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಸಂಜು ತಾಯಿ ಹಾಗೂ ತಂಗಿಯೊಡನೆ ವಾಸವಾಗಿದ್ದ. ತಾಯಿ ಚಿಕ್ಕಪ್ಪನ ಮನೆಗೆ ಹೋದ ವೇಳೆ ಮನೆಯಲ್ಲಿ ಅಣ್ಣ ತಂಗಿ ಇಬ್ಬರೇ ಇದ್ದರು. ಈ ವೇಳೆ ಅಶ್ಲೀಲ ವಿಡಿಯೋಗಳನ್ನು ನೋಡಿ ತಂಗಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ತನ್ನ ತಪ್ಪು ಮುಚ್ಚಿ ಹಾಕಲು ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ.
ಸಂತ್ರಸ್ತೆಯ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂಜು ಅರೆಸ್ಟ್ ಆಗಿದ್ದಾನೆ. ತಾನೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ತಮ್ಮದೇ ಮನೆಯಲ್ಲಿ ಸ್ವಂತ ಅಣ್ಣ ತಂಗಿಯನ್ನೂ ಒಂಟಿಯಾಗಿ ಬಿಡಲು ಭಯಪಡುವಂಥ ಘಟನೆ ಇದಾಗಿದೆ. ಮಕ್ಕಳಿಗೆ ಲೈಂಗಿಕ ಶಿಕ್ಷಣ, ಸಂಬಂಧಗಳ ಬಗ್ಗೆ ಸಣ್ಣ ವಯಸ್ಸಿನಿಂದಲೇ ಜಾಗೃತಿ ಮೂಡಿಸುವ ಅತ್ಯಾವಶ್ಯಕತೆ ಇದೆ.