ಪಿಲಿಕುಳದ ಪ್ರಮುಖ ಆಕರ್ಷಣೆಯಾಗಿದ್ದ ‘ಓಲಿವರ್’ ಇನ್ನಿಲ್ಲ!

ದಿಗಂತ ವರದಿ ಮಂಗಳೂರು:

ಪಿಲಿಕುಳ ಜೈವಿಕ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿದ್ದ `ಓಲಿವರ್’ ಇನ್ನಿಲ್ಲ.
ಪ್ರವಾಸಿಗರನ್ನು ತನ್ನ ಗಾಂಭೀರ್ಯ ನಡೆಯಿಂದಲೇ ಆಕರ್ಷಿಸುತ್ತಿದ್ದ 9 ವರ್ಷ ಪ್ರಾಯದ ಹುಲಿ `ಓಲಿವರ್’ ಸೋಮವಾರ ಮೃತಪಟ್ಟಿದೆ. ಆರೋಗ್ಯವಾಗಿ ಸದೃಢವಾಗಿದ್ದ ಓಲಿವರ್ ಮುಂಜಾನವರೆಗೆ ಚುರುಕಾಗಿದ್ದು, ಒಮ್ಮಿಂದೊಮ್ಮೆಲೇ ಕುಸಿದು ಬಿದ್ದು ಸಾವನ್ನಪ್ಪಿದೆ. ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.

`ವಿಕ್ರಮ’ ಮತ್ತು `ಶಾಂಭವಿ’ ಹೆಸರಿನ ಹುಲಿಗಳಿಗೆ ಜನಿಸಿದ ಎರಡು ಮರಿಗಳಲ್ಲಿ ಓಲಿವರ್ ಒಂದಾಗಿತ್ತು. ಪಿಲಿಕುಳದಲ್ಲಿ ಪ್ರಸ್ತುತ 12 ಹುಲಿಗಳಿವೆ. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಪರೀಕ್ಷೆಗಾಗಿ ಐಎಎಚ್ ವಿಬಿ ಬೆಂಗಳೂರು ಮತ್ತು ಉತ್ತರ ಪ್ರದೇಶದ ಐವಿಆರ್‌ಟ್‌ಗೆ ಕಳುಹಿಸಲಾಗಿದೆ. ಕೋವಿಡ್ ಪರೀಕ್ಷೆಗಾಗಿ ಮಾದರಿಯನ್ನು ಭೋಪಾಲದ ನಿಶಾದ್‌ಗೆ ಕಳುಹಿಸಲಾಗಿದೆ. ಮೃಗಾಲಯದಲ್ಲಿ ಅನುಮಾನಸ್ಪದ ಯಾವುದೇ ರೋಗವು ಹರಡದಂತ ರೋಗ ನಿರೋದಕ ದ್ರಾವಣವನ್ನು ಮೃಗಾಲಯದೊಳಗೆ ಮತ್ತು ಸುತ್ತ ಮುತ್ತ ಸಿಂಪಡಿಸಲಾಗುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ.ಭಂಡಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!