ಓಂ, ಅರ್ಧಚಂದ್ರ, ನಕ್ಷತ್ರ: ಒಂದೇ ನಾಮಫಲಕ ಹಂಚಿಕೊಂಡು ಸೌಹಾರ್ದ ಮೆರೆದ ದೇವಸ್ಥಾನ, ಮಸೀದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದೇ ನಾಮಫಲಕದಲ್ಲಿ ದೇವಸ್ಥಾನ ಹಾಗೂ ಮಸೀದಿಯ ಹೆಸರು ಬರೆಯುವ ಮೂಲಕ ತಿರುವನಂತಪುರದ ಈ ಊರಿನಲ್ಲಿ ಸೌಹಾರ್ದತೆ ಹೆಚ್ಚಿಸುವ ಕಾರ್ಯ ನಡೆದಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಇಲ್ಲಿನ ಮೆಲೆಕುಟ್ಟಿಮೂಡು ಶ್ರೀ ಚಾಮುಂಡೇಶ್ವರಿ ದೇವಾಲಯ ಜೀರ್ಣಾವಸ್ಥೆಯಲ್ಲಿದ್ದು, ಇತ್ತೀಚೆಗೆ ಜೀರ್ಣೋದ್ಧಾರಗೊಂಡಿತ್ತು. ಆದರೆ ಇದೇ ಪರಿಸರದಲ್ಲಿ ಮಸೀದಿಯೂ ಇದ್ದು, ಮಸೀದಿಯ ಕಮಾನು ಅದಾಗಲೇ ರಸ್ತೆಯಲ್ಲಿ ಅಳವಡಿಸಲಾಗಿತ್ತು.

ಇತ್ತ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ದಾರಿ ಗುರುತಿಸಲು ಕಮಾನು ಹಾಕುವುದು ಹೇಗೆ ಎಂಬ ಪ್ರಶ್ನೆ ಆಡಳಿತ ಮಂಡಳಿಯಲ್ಲಿ ಉದ್ಭವಾಗಿತ್ತು.

ಈ ಬಗ್ಗೆ ಎರಡೂ ಸಮುದಾಯದವರು ಮಾತುಕತೆಗೆ ಕುಳಿತಿದ್ದು, ಒಂದೇ ಕಮಾನಿನಲ್ಲಿ ದೇವಸ್ಥಾನ ಹಾಗೂ ಮಸೀದಿಯ ಹೆಸರು ಬರೆಸುವ ಮೂಲಕ ಸಮಸ್ಯೆಗೆ ಸೌಹಾರ್ದತೆಯಿಂದ ಪರಿಹಾರ ಕಂಡುಕೊಂಡಿದ್ದಾರೆ.
ಇದೀಗ ಒಂದೇ ಕಮಾನಿನಲ್ಲಿ ಓಂ, ನಕ್ಷತ್ರ ಮತ್ತು ಅರ್ಧಚಂದ್ರನ ಚಿಹ್ನೆ ಎಲ್ಲರನ್ನು ಆಕರ್ಷಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!