May 11, 2026
Monday, May 11, 2026
spot_img

ನೆಲದ ಮೇಲೆ ಕುಳಿತು ಪುರಿ-ಪಲ್ಯ ಸವಿದ ಓಂ ಬಿರ್ಲಾ: ಸ್ಪೀಕರ್ ಸರಳತೆಗೆ ನೆಟ್ಟಿಗರು ಖುಷ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅಂದಾಗ ಅವರ ಮಾತಿನ ಗಾಂಭೀರ್ಯತೆ ಎಲ್ಲವು ಕಣ್ಮುಂದೆ ಬರುತ್ತದೆ. ಅದರಲ್ಲೂ ದೇಶದ ಪ್ರಮುಖ ಹುದ್ದೆಯಲ್ಲಿದ್ದಾಗ ಅವರ ವಿಐಪಿ ಪ್ರೋಟೋಕಾಲ್‌ ಗಳು ಮುಖ್ಯವಾಗಿರುತ್ತದೆ. ಆದರೆ ಓಂ ಬಿರ್ಲಾ ಅವರು ಅದೆಲ್ಲವನ್ನು ಪಕ್ಕಕ್ಕಿಟ್ಟು, ಸಾಮಾನ್ಯರಲ್ಲಿ ಸಾಮಾನ್ಯನಂತೆ ನೆಲದ ಮೇಲೆ ಕುಳಿತು ಊಟ ಮಾಡಿ ಸರಳತೆಯನ್ನು ಮೆರೆದಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ.

ಕೋಟಿ ಬುಂಡಿ ಕ್ಷೇತ್ರದ ಸಂಸದರಾಗಿರುವ ಅವರು, ಸ್ವ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಮಾತಾಜಿ ಮಂದಿರದ ಸಾರ್ವಜನಿಕ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮಗೆ ಮೀಸಲಾಗಿರುವ ವಿಶೇಷ ವ್ಯವಸ್ಥೆಗಳನ್ನು ನಿರಾಕರಿಸಿ, ಸಾಮಾನ್ಯ ಭಕ್ತರ ಸಾಲಿನಲ್ಲಿ ಕುಳಿತು ಪುರಿ-ಪಲ್ಯ ಸವಿದರು. ಜೊತೆಗೆ ತಮ್ಮ ಪಕ್ಕದಲ್ಲಿ ಕುಳಿತ ಇತರೆ ಜನರೊಂದಿಗೆ ನಗುನಗುತ್ತಾ ಮಾತನಾಡಿದರು.

https://www.instagram.com/bobby_mahawar6363/?utm_source=ig_embed&ig_rid=36c4acee-9823-4b12-b0b5-eea1b96ea6dc

ಸದ್ಯ ಈ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಸ್ಪೀಕರ್ ಓಂ ಬಿರ್ಲಾ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !