May 28, 2026
Thursday, May 28, 2026
spot_img

ಒಮರ್ ಅಬ್ದುಲ್ಲಾ ‘ಬ್ಲಡಿ ಹೆಲ್’ ಪೋಸ್ಟ್ ವೈರಲ್: ಕಾಶ್ಮೀರ ನಾಯಕನ ಆಕ್ರೋಶಕ್ಕೆ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಕುತೂಹಲ ಕೆರಳಿಸಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಭಾರತೀಯ ರಾಜಕೀಯ ಭೂಪಟದಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿವೆ. ಆರಂಭಿಕ ಟ್ರೆಂಡ್‌ಗಳು ಹಲವು ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷಗಳಿಗೆ ಆಘಾತ ನೀಡಿದ್ದರೆ, ಹೊಸ ಶಕ್ತಿಗಳ ಉದಯಕ್ಕೆ ಸಾಕ್ಷಿಯಾಗಿವೆ.

ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಚುನಾವಣಾ ಫಲಿತಾಂಶಗಳ ಟ್ರೆಂಡ್ ನೋಡಿ ಅಸಮಾಧಾನಗೊಂಡಿರುವ ಅವರು ಎಕ್ಸ್ ಖಾತೆಯಲ್ಲಿ “ಬ್ಲಡಿ ಹೆಲ್” ಎಂದು ಪೋಸ್ಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಾರೆಯಾಗಿ, 2026ರ ಈ ಚುನಾವಣಾ ಫಲಿತಾಂಶಗಳು ಭಾರತದ ರಾಜಕೀಯ ದಿಕ್ಕನ್ನು ಬದಲಿಸುವ ಮುನ್ಸೂಚನೆ ನೀಡಿವೆ. ಅಂತಿಮ ಫಲಿತಾಂಶದ ನಂತರ ಈ ರಾಜ್ಯಗಳ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಸ್ಪಷ್ಟವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !