ಒಮಿಕ್ರಾನ್ ಬೆನ್ನಲ್ಲೇ ಶುರುವಾಗಿದೆ ಮತ್ತೊಂದು ಸೋಂಕಿನ ಆತಂಕ: ಫ್ರಾನ್ಸ್‌ನಲ್ಲಿ ಹೊಸ ರೂಪಾಂತರಿ ‘IHU’ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಾಗಲೇ ವಿಶ್ವದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ತಲ್ಲಣ ಸೃಷ್ಟಿಸುತ್ತಿದ್ದು, ಇದರ ಬೆನ್ನಲ್ಲೇ ಇದೀಗ ವಿಜ್ಞಾನಿಗಳು ದಕ್ಷಿಣ ಫ್ರಾನ್ಸ್‌ನಲ್ಲಿಕೊರೋನಾದ ಹೊಸ ತಳಿಯನ್ನು ಪತ್ತೆ ಹಚ್ಚಿದ್ದಾರೆ.
ಈ B.1.640.2 ಎಂಬ ಈ ರೂಪಾಂತರಕ್ಕೆ ‘IHU’ ಎಂದು ಕರೆಯಲಾಗಿದೆ. ಇದನ್ನು ಫ್ರಾನ್ಸ್‌ನ IHU ಮೆಡಿಟರೇನ್ ಸೋಂಕು ತಜ್ಞರು ಪತ್ತೆ ಹಚ್ಚಿದ್ದಾರೆ. ಇದು ಬರೋಬ್ಬರಿ 46 ಉಪ ರೂಪಾಂತರಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸದ್ಯ ಇದೀಗ 12 ಮಂದಿಯಲ್ಲಿ ಈ ಪ್ರಕರಣ ವರದಿಯಾಗಿದೆ.
ಆಫ್ರಿಕಾದ ಕ್ಯಾಮರೂನ್‌ಗೆ ಸಂಚಾರ ಬೆಳೆಸಿದ್ದವರಲ್ಲಿ ಈ ವೈರಸ್ ಕಂಡು ಬಂದಿದ್ದು, ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.
ಸದ್ಯ B.1.640.2 ಇಲ್ಲಿಯವರೆಗೆ ಇತರ ದೇಶಗಳಲ್ಲಿ ಗುರುತಿಸಲಾಗಿಲ್ಲ. ಹಾಗೆ ವಿಶ್ವ ಆರೋಗ್ಯ ಸಂಸ್ಥೆ (WHO) ತನಿಖೆಯ ಅಡಿಯಲ್ಲಿ ಈ ರೂಪಾಂತರವನ್ನು ಲೇಬಲ್ ಮಾಡಲಾಗಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಅವರು ಟ್ವಿಟರ್​ನಲ್ಲಿ ಮಾಹಿತಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!