ಶಿವಮೊಗ್ಗದಲ್ಲಿ ಟಿಪ್ಪರ್ ಗೆ ಓಮ್ನಿ ಡಿಕ್ಕಿ: 6 ಜನರಿಗೆ ಗಂಭೀರ ಗಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಟಿಪ್ಪರ್ ಲಾರಿಗೆ ಓಮ್ನಿ ಕಾರು ಡಿಕ್ಕಿಯಾದ ಪರಿಣಾಮ, 6 ಜನರು ಗಂಭೀರ ಗಾಯಗೊಂಡಿದ್ದು, 6 ಜನರು ಸಣ್ಣಪುಟ್ಟ ಗಾಯವಾಗಿರುವ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಎಂ.ಗುಡ್ಡೆಕೊಪ್ಪ ಬಳಿಯಲ್ಲಿ ಟಿಪ್ಪರ್ ಲಾರಿಗೆ ಓಮ್ನಿ ಕಾರು ಡಿಕ್ಕಿಯಾಗಿದೆ.

ಗಾಯಾಳುಗಳು ಎಲ್ಲರೂ ಹೊಸನಗರ ತಾಲೂಕಿನ ಬುಲ್ಡೋಜರ್ ಗುಡ್ಡ ಗ್ರಾಮದವರು. ಗಾಯಾಳುಗಳನ್ನು ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!