ಸಾಮಾಗ್ರಿಗಳು
ಚಿಕನ್
ಮೊಸರು
ಹಸಿಮೆಣಸು
ಉಪ್ಪು
ಕ್ಯಾರೆಟ್
ಸೌತೆಕಾಯಿ
ಕಾಳುಮೆಣಸು
ಮಾಡುವ ವಿಧಾನ
ಮೊದಲು ಚಿಕನ್ಗೆ ಮೊಸರು ಉಪ್ಪು ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮ್ಯಾರಿನೇಟ್ ಮಾಡಿ. ನಂತರ ಬಾಣಲೆಗೆ ಬೆಣ್ಣೆ ಹಾಕಿ ಅದನ್ನು ಬೇಯಿಸಿ ರೋಸ್ಟ್ ಮಾಡಿ
ನಂತರ ಮೊಸರು, ಉಪ್ಪು ಹಾಗೂ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸಿ ಮಾಡಿ
ಸಣ್ಣದಾಗಿ ಕತ್ತರಿಸಿದ ತರಕಾರಿಗೆ ಚಿಕನ್ ಹಾಗೂ ಮಿಕ್ಸಿ ಮಾಡಿದ ಮೊಸರು ಹಾಕಿದ್ರೆ ಸಲಾಡ್ ರೆಡಿ