VIRAL VIDEO| ಕೆ.ಆರ್‌ಪುರಂ ರೈಲು ನಿಲ್ದಾಣದಲ್ಲಿ ಟಿಸಿಯೊಂದಿಗೆ ಜಗಳ, ಕಣ್ಣೀರಾಕಿದ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್‌ ಮತ್ತು ಮಹಿಳಾ ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಯುವತಿಯೊಬ್ಬಳು ಪ್ಲಾಟ್‌ಫಾರ್ಮ್ ಮೇಲೆ ನಿಂತಿದ್ದ ವೇಳೆ ಟಿಸಿ-ಯವತಿ ನಡುವೆ ಮಾತಿನ ಚಕಮಕಿ ನಡೆದಿದೆ.

ವೀಡಿಯೋದಲ್ಲಿರುವ ವಿವರಗಳ ಪ್ರಕಾರ… “ನನ್ನನ್ನು ಯಾಕೆ ಬೈಯುತ್ತಿದ್ದೀರಿ. ನಾನು ಟಿಕೆಟ್ ಬುಕ್ ಮಾಡಿದ್ದೇನೆ. ಅದಕ್ಕೇ ನಾನಿಲ್ಲಿ ಬಂದಿದ್ದೇನೆ” ಎಂದು ಯುವತಿ ಟಿಸಿ ಜತೆ ವಾದ ಮಾಡಿದ್ದಾರೆ. “ಟಿಕೆಟ್ ತೋರಿಸಿ ಮುಂದಕ್ಕೆ ಹೋಗಿ, ಇದು ನನ್ನ ಕೆಲಸ” ಎಂದು ಟಿಸಿ ಹೇಳಿದ್ದಾರೆ.

ಇಬ್ಬರ ನಡುವೆ ಮಾತಿಗೆ ಮಾತು ಹೆಚ್ಚಾಗಿ ಸಹ ಪ್ರಯಾಣಿಕರು ಯುವತಿಗೆ ಬೆಂಬಲ ವ್ಯಕ್ತಪಡಿಸಿದರು. “ ಆ ಹುಡುಗಿ ಒಬ್ಬಳೇ ಪ್ರಯಾಣಿಸುತ್ತಿದ್ದಾಳೆ, ಆಕೆ ಯಾರೆಂದು ಕೂಡ ನನಗೆ ಗೊತ್ತಿಲ್ಲ. ಆದರೆ ಟಿಸಿ ನಿಂದಿಸುತ್ತಿರುವುದನ್ನು ಕಂಡು ನಾನು ಮಾತನಾಡುತ್ತಿದ್ದೇನೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು. ಯುವತಿ ತಾನು ಈಗಾಗಲೇ ಟಿಕೆಟ್ ಅನ್ನು ಇನ್ನೊಬ್ಬ ಟಿಕೆಟ್ ಕಲೆಕ್ಟರ್‌ಗೆ ತೋರಿಸಿದ್ದೇನೆ. ಈಗ ಮತ್ತೆ ಬಂದು ಹಿಂದಿನಿಂದ ತಳ್ಳಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಣ್ಣೀರಾಕಿರುವ ವಿಡಿಯೋ ವೈರಲ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!