ಚೌತಿಯಂದು ಮನೆಯಲ್ಲಿ ಗಣೇಶನ ಪೂಜಿಸಿದ ಮುಸ್ಲಿಂ ನಾಯಕಿ ವಿರುದ್ಧ ಫತ್ವಾ ಜಾರಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯಲ್ಲಿ ಗಣೇಶ ಚತುರ್ಥಿಯಂದು ಗಣಪನ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿದ್ದ ಆಲಿಘಡದ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರೂಬಿ ಆಶಿಫ್ ಖಾನ್ ವಿರುದ್ಧ ಫತ್ವಾ ಜಾರಿಯಾಗಿದೆ!
ರೂಬಿ ಆಸಿಫಾ ನಡವಳಿಕೆ ಇಸ್ಲಾಮಿಕ್ ವಿರುದ್ಧವಾಗಿದೆ ಎಂದು ದೇವಬಂದ್ ಮುಫ್ತಿ ಅರ್ಷದ್ ಫಾರೂಕಿ ಫತ್ವಾ ಹೊರಡಿಸಿದ್ದಾರೆ.
ಇಸ್ಲಾಂನಲ್ಲಿ ವಿಗ್ರಹ ಪೂಜೆಯನ್ನು ಅನುಮತಿಸಲಾಗುವುದಿಲ್ಲ. ಇಸ್ಲಾಂ, ಅಲ್ಲಾಹನನ್ನು ಹೊರತುಪಡಿಸಿ ಯಾರನ್ನೂ ಪೂಜಿಸಲು ಅನುಮತಿಸುವುದಿಲ್ಲ. ಇಸ್ಲಾಂನಲ್ಲಿ ವಿಗ್ರಹ ಪೂಜಿಸುವವರ ವಿರುದ್ಧ, ಇಸ್ಲಾಂ ಧರ್ಮಕ್ಕೆ ವಿರುದ್ಧವಾದವರ ವಿರುದ್ಧ ಫತ್ವಾ ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಫತ್ವಾ ಕುರಿತು ಪ್ರತಿಕ್ರಿಯಿಸಿರುವ ರೂಬಿ ಖಾನ್, ಇಂತಹ ಧರ್ಮಗುರುಗಳು, ಮುಫ್ತಿಗಳು ಕೇವಲ ಧಾರ್ಮಿಕ ಆಧಾರದ ಮೇಲೆ ಸಮಾಜ ವಿಭಜನೆಯಲ್ಲಿ ತೊಡಗಿದ್ದಾರೆ. ಈ ಹಿಂದೆಯೂ ತಾನು ಇಂತಹ ಹಲವು ಫತ್ವಾಗಳನ್ನು ಎದುರಿಸಿದ್ದು, ಇದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.
ರೂಬಿ ಆಸಿಫ್ ಖಾನ್ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ಸೌಹಾರ್ದತೆಯ ಉದಾಹರಣೆಯಾಗಿ ಈ ಬಾರಿ ಗಮನ ಸೆಳೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!