ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ ಚೀತಾಗಳ ಸಾವು ʻಸಹಜʼ ಎಂದು ನಮೀಬಿಯಾ ಹೈಕಮಿಷನರ್ ಗೇಬ್ರಿಯಲ್ ಸಿನಿಂಬೊ ಶನಿವಾರ ಹೇಳಿದ್ದಾರೆ. ಜೊತೆಗೆ ಚೀತಾಗಳು ಭಾರತದ ಹವಾಮಾನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದರು.
ಎರಡು ದೇಶಗಳಿಂದ ತರಲಾದ 20 ಚೀತಾಗಳಲ್ಲಿ ಒಂಬತ್ತು ಈ ವರ್ಷದ ಮಾರ್ಚ್‌ನಿಂದ ಸಾವನ್ನಪ್ಪಿವೆ. ಇವುಗಳನ್ನು ಹೊಸ ಪರಿಸರಕ್ಕೆ ಪರಿಚಯಿಸಿದಾಗ, ಮರಣದಂತಹ ಸವಾಲುಗಳಿರುತ್ತವೆ ಎಂಬ ಮಾತುಗಳನ್ನು ಸಿನಿಂಬೊ ಹೇಳಿದರು. “ನೀವು ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಪರಿಚಯಿಸುವಾಗ, ಸಾವುನೋವುಗಳಂತಹ ಕೆಲವು ಸವಾಲುಗಳು ಇರಬಹುದು. ಇದು ಯೋಜನೆಯ ಒಂದು ಭಾಗವೇ ಆಗಿರುತ್ತದೆ” ಎಂದರು.
ನೈಸರ್ಗಿಕ ಕಾರಣಗಳಿಂದ ಚೀತಾಗಳು ಸಾವನ್ನಪ್ಪಿವೆಯೇ ಹೊರತು ರೇಡಿಯೋ ಕಾಲರ್‌ನಿಂದಲ್ಲ ಎಂದು ಪರಿಸರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಕುನೋ ಉದ್ಯಾನವನದಲ್ಲಿರುವ ಹದಿನಾಲ್ಕು ಚಿರತೆಗಳು ಏಳು ಗಂಡು, ಆರು ಹೆಣ್ಣು ಮತ್ತು ಒಂದು ಹೆಣ್ಣು ಮರಿಯನ್ನು ಕುನೋ ವನ್ಯಜೀವಿ ಪಶುವೈದ್ಯರು ಮತ್ತು ನಮೀಬಿಯಾದ ತಜ್ಞರನ್ನು ಒಳಗೊಂಡ ತಂಡವು ಮೇಲ್ವಿಚಾರಣೆ ಮಾಡುತ್ತಿದೆ.