ಮಾರ್ಚ್‌ 19 ರಂದು ಕುಂತಿ ಟೀಚರ್ ಸಾಕ್ಷ್ಯಚಿತ್ರ ತೆರೆಗೆ

ಹೊಸದಿಗಂತ ವರದಿ ಮಡಿಕೇರಿ:

ರಾಜ್ಯದ ಪ್ರಥಮ ಕ್ರೀಡಾ ಶಾಲೆಯಾದ ಕೂಡಿಗೆ ಕ್ರೀಡಾ ಶಾಲೆಯಲ್ಲಿ 36 ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಕುಂತಿ ಬೋಪಯ್ಯ ಅವರ ಸೇವಾ ಸಾಧನೆ ಕುರಿತ ಸಾಕ್ಷ್ಯಚಿತ್ರ ‘ಕುಂತಿ ಟೀಚರ್’ ಮಾ.19 ರಂದು ಮಡಿಕೇರಿಯಲ್ಲಿ ತೆರೆ ಕಾಣಲಿದೆ.

ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಾ. 19 ರಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಚಿಂತಕ ಹಾಗೂ ಹಿರಿಯ ವೈದ್ಯ ಡಾ.ಎಂ.ಜಿ.ಪಾಟ್ಕರ್ ಮತ್ತು ಭಾರತೀಯ ವಿದ್ಯಾಭವನ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್.ದೇವಯ್ಯ ಅವರು ಸಾಕ್ಷ್ಯಚಿತ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕುಂತಿ ಅವರು ಕ್ರೀಡಾ ಶಾಲೆಯಲ್ಲಿ ದಾಖಲೆ ಅವಧಿಗೆ ಸೇವೆ ಸಲ್ಲಿಸಿದ ಕೀರ್ತಿ ಹೊಂದಿದ್ದು ಗ್ರಾಮೀಣ ಪ್ರದೇಶದ ಕ್ರೀಡಾ ಶಾಲೆಯ ಉನ್ನತಿಗೆ ಅವರು ಶ್ರಮಿಸಿದ ರೀತಿಯನ್ನು ಸಾಕ್ಷ್ಯಚಿತ್ರದಲ್ಲಿ ಬಿಂಬಿಸಲಾಗಿದೆ. ಕುಂತಿ ಅವರ ಕುರಿತು ಶಾಲೆಯ ಶಿಕ್ಷಕ ವರ್ಗ, ವಿದ್ಯಾರ್ಥಿಗಳು, ನಿಕಟವರ್ತಿಗಳ ಹೇಳಿಕೆಗಳನ್ನು 50 ನಿಮಿಷದ ಈ ಚಿತ್ರ ಹೊಂದಿದೆ. ಸಾಕ್ಷ್ಯಚಿತ್ರವನ್ನು ಪತ್ರಕರ್ತ ಅನಿಲ್ ಎಚ್.ಟಿ. ನಿರ್ದೇಶಿಸಿದ್ದು, ವೀರಾಜಪೇಟೆಯ ಸಂಕೇತ್ ಸ್ಟುಡಿಯೋದಲ್ಲಿ ಸಂಕಲನ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!