ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರಾಜ್ಯೋತ್ಸವದ ಅಂಗವಾಗ ಕಳೆದ ಒಂದು ತಿಂಗಳಿನಿಂದ ಕೇಶವಶಿಲ್ಪದಲ್ಲಿ ನಡೆಯುತ್ತಿರುವ ರಾಷ್ಟ್ರೋತ್ಥಾನ ಪುಸ್ತಕ ಹಬ್ಬವು ಅಂತಿಮ ಘಟ್ಟವನ್ನು ತಲುಪಿದ್ದು ನ.26 ಹಾಗು 27 ರಂದು ಕೊನೆಯ ವಾರಾಂತ್ಯದ ಕಾರ್ಯಕ್ರಮಗಳು ನಡೆಯಲಿವೆ. ಹಾಗೂ ನ.27ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
ಕೊನೆಯ ವಾರಾಂತ್ಯ ಕಾರ್ಯಕ್ರಮಗಳ ಭಾಗವಾಗಿ ನ.26ರಂದು ಬೆಳಿಗ್ಗೆ 11 ಗಂಟೆಗೆ ʼಅನುವಾದ ಯಂತ್ರಗಳು: ಭಾಷೆ ಮತ್ತು ಸಾಂಸ್ಕೃತಿಕ ಸವಾಲುಗಳುʼ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನ ಚಾಣಕ್ಯ ವಿವಿಯ ಪ್ರೋ. ಎಂ.ಎಸ್ ಚೈತ್ರ, ಡಾ.ಹರ್ಷಿತ್ ಜೋಸೆಫ್, ಡಾ.ತಿಲಕ್ ರಾವ್, ಡಾ.ಅಶ್ವಿನ್ ದೇಸಾಯಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ 5 ಗಂಟೆಗೆ ಥಟ್ ಅಂತ ಹೇಳಿ ಖ್ಯಾತಿಯ ನಾ. ಸೋಮೇಶ್ವರ್ ಅವರಿಂದ ʼವ್ಯಕ್ತಿತ್ವ ಚಿತ್ರಣದ ಅನನ್ಯ ಮಾದರಿ ಜ್ಞಾಪಕ ಚಿತ್ರಶಾಲೆʼ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.
ನವೆಂಬರ್ 27 ರಂದು ಬೆಳಿಗ್ಗೆ 11 ಗಂಟೆಗೆ ʼಬ್ರಿಟೀಷ್ ಪೂರ್ವ ಭಾರತದಲ್ಲಿ ಶಿಕ್ಷಣ ವ್ಯವಸ್ಥೆʼ ಎಂಬ ವಿಷಯದ ಕುರಿತು ಕುವೆಂಪು ವಿವಿಯ ಪ್ರಾಧ್ಯಾಪಕರಾದ ಪ್ರೊ.ಎ ಷಣ್ಮುಖ ಅವರಿಂದ ಉಪನ್ಯಾಸ ನಡೆಯಲಿದೆ.
ಅದೇ ದಿನ ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಸ್ವಾಮಿ ವೀರೇಶಾನಂದಜಿ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಶಿವಮೊಗ್ಗದ ಸಾಹಿತ್ಯ ಪರಿಚಾರಕರಾದ ಪಿ.ಶಿವಣ್ಣ ಅವರಿಗೆ ಗೌರವಾರ್ಪಣೆ ಇರಲಿದೆ. ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.