ಪ್ರಧಾನಿ ಹುಟ್ಟುಹಬ್ಬ: NaMo ಅಪ್ಲಿಕೇಶನ್‌ನಲ್ಲಿ ನಿಮ್ಮ ‘ಸೇವಾ ಭಾವ’ವನ್ನು ವ್ಯಕ್ತಪಡಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಾಗತಿಕ ನಾಯಕನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ದೇಶದ ಅತ್ಯಂತ ಶಕ್ತಿಶಾಲಿ ಮತ್ತು ಜನಪ್ರಿಯ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಲು ಹೆಚ್ಚು ಬೇಡಿಕೆಯಿರುವ ವೇದಿಕೆಗಳಲ್ಲಿ ‘NaMo’ ಅಪ್ಲಿಕೇಶನ್ ಕೂಡ ಒಂದಾಗಿದೆ. ಮೋದಿಯವರ 73 ನೇ ಜನ್ಮ ವಾರ್ಷಿಕೋತ್ಸವದಂದು, ಲಕ್ಷಾಂತರ ಜನರು ಈ ಮೊಬೈಲ್ ಅಪ್ಲಿಕೇಶನ್‌ಗೆ ಪ್ರಧಾನಿ ಮೋದಿಯವರಿಗೆ ತಮ್ಮ ಶುಭಾಶಯಗಳನ್ನು ಕಳುಹಿಸುತ್ತಾರೆ.

ಶುಭಾಶಯಗಳ ಹೊರತಾಗಿಯೂ NaMo ಅಪ್ಲಿಕೇಶನ್, ಈಗ ರಾಷ್ಟ್ರೀಯ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಜನರನ್ನು ಸಂಪರ್ಕಿಸುವ ಪ್ರಮುಖ ಆನ್‌ಲೈನ್ ವೇದಿಕೆಗಳಲ್ಲಿ ಒಂದಾಗಿದೆ. ತಂತ್ರಜ್ಞಾನ ಮತ್ತು ‘ಸೇವಾ ಭಾವ’ ಅಳವಡಿಸಿಕೊಳ್ಳಲು ಬಳಕೆದಾರರನ್ನು ಉತ್ತೇಜಿಸುತ್ತದೆ.

ಬಿಜೆಪಿ ಕಾರ್ಯಕರ್ತರು, ಸಾಮಾನ್ಯ ಜನರು ಕೂಡ ಈ ‘NaMo’ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಈ ಆಪ್‌ ಮೂಲಕ ಹಂಚಿಕೊಳ್ಳಬಹುದು. ಈ ಅಪ್ಲಿಕೇಶನ್ ಮೂಲಕ ದೇಶಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ನಾಯಕನ ಸಾಧನೆಗಳಲ್ಲಿ ದೇಶವಾಸಿಗಳು ತಮ್ಮ ಹೆಮ್ಮೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ.

ಬ್ಯಾಡ್ಜ್‌ಗಳನ್ನು ಪಡೆಯಲು ಬಳಕೆದಾರರು ‘ಸೇವಾ ಚಟುವಟಿಕೆಗಳ’ ಚಿತ್ರಗಳನ್ನು ಸಹ ಅಪ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್ 9 ವಿಭಿನ್ನ ‘ಸೇವಾ ಚಟುವಟಿಕೆಗಳನ್ನು’ ಒದಗಿಸುತ್ತದೆ. ಅವುಗಳೆಂದರೆ… ಆತ್ಮನಿರ್ಭರ್, ರಕ್ತದಾನ, ಮಳೆ ನೀರು ಸಂಗ್ರಹ, ಲೀಡಿಂಗ್ ಡಿಜಿಟಲ್ ಇಂಡಿಯಾ, ಏಕ್ ಭಾರತ್ ಶ್ರೇಷ್ಠ ಭಾರತ್, ಲೈಫ್: ಪ್ರೊ-ಪ್ಲಾನೆಟ್ ಪೀಪಲ್, ಸ್ವಚ್ಛ ಭಾರತ, ಟಿಬಿ ಮುಕ್ತ ಭಾರತ, ಓಕಲ್​ ಫಾರ್​​ ಲೋಕಲ್

‘ಸೇವಾ ಚಟುವಟಿಕೆಗಳನ್ನು’ ಪೂರ್ಣಗೊಳಿಸಿದ ನಂತರ ಪಡೆದ ಬ್ಯಾಡ್ಜ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಅವರ ಕುಟುಂಬಗಳು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ದೇಶದ ಭವಿಷ್ಯವನ್ನು ರೂಪಿಸಲು ಕೊಡುಗೆ ನೀಡುವ ಚಟುವಟಿಕೆಗಳನ್ನು ಕೈಗೊಳ್ಳಲು ಅವರನ್ನು ಪ್ರೋತ್ಸಾಹಿಸುವ ಪ್ರಯತ್ನದಲ್ಲಿದೆ ನಮೋ ಅಪ್ಲಿಕೇಶನ್.‌

‘NaMo’ ಅಪ್ಲಿಕೇಶನ್ ಬಳಕೆದಾರರಿಗೆ ತಮ್ಮ ಇಚ್ಛೆಯ ಯಾವುದೇ ಕೇಂದ್ರ ಸರ್ಕಾರದ ಉಪಕ್ರಮಕ್ಕೆ ರೂ 5 ರಿಂದ 100ರೂಪಾಯಿವೆಗೆ ದೇಣಿಗೆ ಕೊಡಬಹುದು. ಇವು ‘ಸ್ವಚ್ಛ ಭಾರತ್ ಮಿಷನ್’, ‘ಬೇಟಿ ಬಚಾವೋ ಬೇಟಿ ಪಡಾವೋ’ ಮತ್ತು ‘ಕಿಸಾನ್ ಸೇವಾ’ ಸೇರಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!