ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ನೂತನ ಸಿಎಂ ಆಗಿ ಅತಿಶಿ ಮರ್ಲೆನಾ ಸಿಂಗ್ ಸೆ.21 ರಂದು ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯ ಕಲ್ಕಾಜಿ ಕ್ಷೇತ್ರದ ಶಾಸಕಿ ಅತಿಥಿ ಅತಿಶಿ ದೆಹಲಿಯ ನೂತನ ಸಿಎಂ ಆಗಿ ಆಯ್ಕೆಗೊಂಡಿದ್ದು, ಸಿಎಂ ಕೇಜ್ರಿವಾಲ್ ಈ ಬಗ್ಗೆ ನಿನ್ನೆ ಘೋಷಣೆ ಮಾಡಿದ್ದರು.
ಸೆ.21 ರಂದು ದೆಹಲಿ ನೂತನ ಸಿಎಂ ಆಗಿ ಅತಿಶಿ ಮರ್ಲೆನಾ ಸಿಂಗ್ ಪದಗ್ರಹಣ ಮಾಡಲಿದ್ದಾರೆ .
ಅತಿಶಿ ಮರ್ಲೆನಾ ಸಿಂಗ್ ದೆಹಲಿಯ ಕಲ್ಕಾಜಿಯಿಂದ ಶಾಸಕರಾಗಿದ್ದಾರೆ . ಅವರು ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಶಿಕ್ಷಣ , PWD, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಪ್ರಾಥಮಿಕವಾಗಿ ಶಿಕ್ಷಣದ ಸಲಹೆಗಾರರಾಗಿ ಜುಲೈ 2015 ರಿಂದ 17 ಏಪ್ರಿಲ್ 2018 ರವರೆಗೆ ಸೇವೆ ಸಲ್ಲಿಸಿದರು.