ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ಇಂದು ರಿಲೀಸ್ ಆಗಿದೆ.
ಬೆಳಗ್ಗೆ 6:30 ಯಿಂದಲೇ ಶೋಗಳು ಹೌಸ್ಫುಲ್ ಆಗಿದ್ದು, ಸದ್ಯ ಒಂದೆರಡು ದಿನದ ಟಿಕೆಟ್ ಬುಕ್ಕಿಂಗ್ ಫಿಲ್ ಆಗಿದೆ.
ರಾಜಧಾನಿ ಬೆಂಗಳೂರಿನಲ್ಲಿಯೇ ಒಟ್ಟಾರೆ 900 ಶೋಗಳು ಬುಕ್ ಆಗಿದ್ದು, ಮೊದಲ ದಿನವೇ 60 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ ಸಿನಿಮಾ ರಿಲೀಸ್ ಆದ ದಿನವೇ ಲೀಕ್ ಆಗಿದ್ದು, ಚಿತ್ರತಂಡದ ಕಮಾಯಿಗೆ ಹೊಡೆತ ಬಿದ್ದಿದೆ.
ಆನ್ಲೈನ್ ಸಿನಿಮಾ ಡೌನ್ಲೋಡಿಂಗ್ ಸೈಟ್ಗಳಲ್ಲಿ ಸಿನಿಮಾ ಲೀಕ್ ಆಗಿದ್ದು, ಸಿನಿಮಾ ಲಿಂಕ್ಸ್ ಫಾರ್ವರ್ಡ್ ಆಗುತ್ತಲೇ ಇದೆ. ಮೊಬೈಲ್ನಲ್ಲಿಯೇ ಸಿನಿಮಾ ನೋಡಬಹುದು ಹಾಗಾಗಿ ಥಿಯೇಟರ್ಗೆ ಹೋಗಿ ದುಡ್ಡು ಖರ್ಚು ಮಾಡುವ ಅಗತ್ಯ ಇಲ್ಲ ಎಂದು ಜನರು ಮನೆಯಲ್ಲೇ ಸಿನಿಮಾ ನೋಡ್ತಿದ್ದಾರೆ.
ಇದರಿಂದಾಗಿ ಸಿನಿಮಾ ಕಲೆಕ್ಷನ್ಗೆ ಹೊಡೆತ ಬೀಳಬಹುದು. ಈ ರೀತಿ ಲಿಂಕ್ ಬಳಸಿ ಸಿನಿಮಾ ನೋಡಬೇಡಿ, ದಯವಿಟ್ಟು ಥಿಯೇಟರ್ಗೆ ಬನ್ನಿ ಎಂದು ಸಿನಿಮಾ ತಂಡ ಮನವಿ ಮಾಡಿದೆ.