ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣ ತುಂಬಾ ವೇಗವಾಗಿ ಕೆಲಸ ಮಾಡುತ್ತಿದೆ. ಪ್ರಪಂಚದ ಯಾವುದೆ ಮೂಲೆಯಲ್ಲಿ ಯಾವುದೇ ಘಟನೆ ನಡೆದರೂ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಅದರಲ್ಲೂ ಮದುವೆಗಳಲ್ಲಿ ನಡೆಯುವ ವಿಚಿತ್ರ, ವಿಶಿಷ್ಟ ಘಟನೆಗಳೂ ಕೂಡ ಇದರಿಂದ ಹೊರತಾಗಿಲ್ಲ. ಅಂಥದ್ದೇ ಘಟನೆಯೊಂದು ಇದೀಗ ಎಲ್ಲರನ್ನು ಆಶ್ಚರ್ಯಗೊಳಿಸಿದೆ.
ಮದುವೆಗೆ ನವವಧು ಧರಿಸಿದ್ದ ಎಲ್‌ಇಡಿ ಲೈಟಿಂಗ್ ಲೆಹೆಂಗಾ ನೋಡುಗರ ಕಣ್ಣು ಕುಕ್ಕುವಂತೆ ಮಾಡಿದೆ. ಇನ್ನೂ ವಿಶೇಷ ಏನಪ್ಪಾ ಅಂದ್ರೆ ಈ ಲೆಹಂಗಾ ಡಿಸೈನ್ ಮಾಡಿದ್ದ ತನ್ನ ಭಾವೀ ಪತಿಯೇ ಎಂದು ವಧು ಪೋಸ್ಟ ಮಾಡಿದಾರೆ. ಪಾಕಿಸ್ತಾನದಲ್ಲಿ ನಡೆದ ಈ ಮದುವೆಗೆ ಕಲರ್ ಫುಲ್ ಎಲ್ ಇಡಿ ಲೈಟ್ ಇರುವ ಲೆಹೆಂಗಾ ಧರಿಸಿ ಪತಿಯೊಂದಿಗೆ ವಧು ಎಂಟ್ರಿ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಧುವಿನ ಲೆಹೆಂಗಾಗೆ ಎಲ್‌ಇಡಿ ಲೈಟ್‌ಗಳನ್ನು ಹಾಕಿರುವ ಕಲ್ಪನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ವರನ ಐಡಿಯಾ ಚೆನ್ನಾಗಿದೆ, ವಧುವಿನ ಪತಿ ಎಲೆಕ್ಟ್ರಿಷಿಯನ್ ಆಗಿರಬಹುದು ಎಂಬ ನಗೆಚಟಾಕಿ ಕಮೆಂಟ್‌ಗಳೂ ಬರುತ್ತಿವೆ.